ಮಂಗಳೂರು: ಕರ್ನಾಟಕ ಮಲ್ಲದಲ್ಲಿ ನಮ್ಮೂರಿನ ನಮ್ಮ ನಮ್ಮ ಸಂಘ ಸಂಸ್ಥೆಗಳ ಸುದ್ದಿಗಳಿಗೆ ಪ್ರಮುಖ್ಯತೆಯನ್ನು ಕೊಡುತ್ತಿದ್ದೇವೆ ಎಂದು ಕರ್ನಾಟಕ ಮಲ್ಲ ದೈನಿಕದ ಸಂಪಾದಕ ಚಂದ್ರಶೇಖರ ಪಾಲೆತ್ತಾಡಿ ಹೇಳಿದರು.
ಅವರು ಜಾಗತಿಕ ಬಂಟರ ಸಂಘದ ವತಿಯಿಂದ ಮಂಗಳೂರು ಜಾಗತಿಕ ಬಂಟರ ಸಂಘದ ಕಚೇರಿಯಲ್ಲಿ ನಡೆದ ಸನ್ಮಾನ ಸ್ವೀಕರಿಸಿ ಮಾತನಾಡಿ ದೇಶ ವಿದೇಶದ ಸುದ್ದಿಗಳನ್ನು ಹೆಚ್ಚಿನ ಪತ್ರಿಕೆಗಳು ಕೊಡುತ್ತದೆ ಆದರೆ ಕರ್ನಾಟಕ ಮಲ್ಲ ಪ್ರಾರಂಭದಲ್ಲಿ ಈ ಬಗ್ಗೆ ಚಿಂತಿಸಿ ನಮ್ಮ ನಮ್ಮವರಿಗೆ ನಮ್ಮೋರಿನ ಜನರು ಓದುವಂತಹ ಪತ್ರಿಕೆಯಾಗಬೇಕು ಎಂದು ತೀರ್ಮಾನಿಸಿ ನಮ್ಮ ಸುದ್ದಿಗಳಿಗೆ ಅದ್ಯತೆ ನೀಡಿ ಬೆಳೆಸಿದ್ದೇವೆ, ಐಕಳ ಹರೀಶ್ ಶೆಟ್ಟಿಯವರು ಜನ್ನಭೂಮಿ ಐಕಳದಿಂದ ಕರ್ಮಭೂಮಿ ಮುಂಬೈಗೆ ಬಂದು ಅದ್ಭುತ ಸಾಧನೆ ಮಾಡಿದ್ದಾರೆ, ಐಕಳ ಹರೀಶ್ ಶೆಟ್ಟಿಯವರು ಮಾಡುವಂತಹ ಪ್ರತಿಯೊಂದು ಕಾರ್ಯಕ್ರಮವೂ ವಿಶೇಷವಾಗಿರುತ್ತದೆ, ಇಂದಿನ ದಿನದಲ್ಲಿ ಒಂದು ಸಭೆ ಸಮಾರಂಭಗಳಿಗೆ ಜನ ಸೇರಿಸುವುದು ಸುಲಭದ ಮಾತಲ್ಲ ಆದರೆ ಐಕಳ ಹರೀಶ್ ಶೆಟ್ಟಿಯವರ ಕಾರ್ಯಕ್ರಮಕ್ಕೆ ನೂರಾರು ಜನ ಸೇರುತ್ತಾರೆ, ಸಂಘದ ಮೂಲಕ ಬಂಟರಿಗೆ ಮಾತ್ರವಲ್ಲ ಎಲ್ಲಾ ಸಮೂದಾಯದವರಿಗೂ ಸಹಾಯ ಹಸ್ತ ನೀಡುವುದು ಒಂದು ಸಾಧನೆಯೇ ಸರಿ ಎಂದರು.
ಅದ್ಯಕ್ಷತೆ ವಹಿಸಿ ಜಾಗತಿಕ ಬಂಟರ ಸಂಘದ ಅದ್ಯಕ್ಷ ಐಕಳ ಹರೀಶ್ ಶೆಟ್ಟಿ ಮಾತನಾಡಿ ಕರಾವಳಿಯ ತುಳುವರ ಬೆಳವಣಿಗೆಗೆ ಕರ್ನಾಟಕ ಮಲ್ಲ ಸಾಕಷ್ಟು ಕೊಡುಗೆ ನೀಡಿದೆ, ಪಾಲೆತ್ತಾಡಿಯವರು ಮಲ್ಲದ ಸಾರಥಿಯಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ ನಮ್ಮ ಊರಿನ ಸಂಘ ಸಂಸ್ಥೆಗಳನ್ನು ಕರ್ನಾಟಕ ಮಲ್ಲದ ಮೂಲಕ ಮೇಲೆತ್ತಿದ್ದಾರೆ, ಯಾವೂದೇ ಸುದ್ದಿಗಳಲ್ಲಿ ರಾಜಿ ಮಾಡಿಕೊಳ್ಳದೆ ನೇರ ನಡೆನುಡಿಯ ದಿಟ್ಟಪತ್ರಕರ್ತರಾಗಿ ಬೆಳೆದಿದ್ದಾರೆ ಎಂದರು.
ಈ ಸಂದರ್ಭ ಬಂಟರ ಸಂಘದ ಜೊತೆ ಕಾರ್ಯದರ್ಶಿ ಸತೀಶ್ ಅಡಪ, ಸುಧಾಕರ ಪೂಂಜ, ಬೆಳ್ತಂಗಡಿ ಬಂಟರ ಸಂಘದ ಅಧ್ಯಕ್ಷ ದೇವಪ್ಪ ಶೆಟ್ಟಿ, ಸುರತ್ಕಲ್ ಬಂಟರ ಸಂಘದ ಸುಧಾಕರ ಪೂಂಜ, ಸಚ್ಚಿದಾನಂದ ಹೆಗ್ಡೆ ಉಪಸ್ಥಿತರಿದ್ದರು.
Kshetra Samachara
23/11/2021 06:16 pm