ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿನ್ನಿಗೋಳಿ: ನಾಗರಿಕರು ಸೌಲಭ್ಯ ಸದುಪಯೋಗಿಸಿಕೊಳ್ಳಿ; ಹರಿಕೃಷ್ಣ ಪುನರೂರು

ಮುಲ್ಕಿ: ಕಿನ್ನಿಗೋಳಿಯ 'ಯುಗ ಪುರುಷ' ಆಶ್ರಯದಲ್ಲಿ ಲಯನ್ಸ್ ಕ್ಲಬ್ ಕಟೀಲ್ ಎಕ್ಕಾರ್, ಲಯನ್ಸ್ ಕ್ಲಬ್ ಮುಲ್ಕಿ, ಲಿಯೋ ಕ್ಲಬ್ ಮುಲ್ಕಿ ಸಹಯೋಗದಲ್ಲಿ, ಸ್ಥಳೀಯ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉಜ್ಜೋಡಿ ಮಂಗಳೂರು ಇವರಿಂದ ಉಚಿತ ನೇತ್ರ ತಪಾಸಣೆ ಶಿಬಿರ ಹಾಗೂ ಕನ್ನಡಕ ವಿತರಣೆ ಭಾನುವಾರ ಕಿನ್ನಿಗೋಳಿ ಯುಗಪುರುಷ ಸಭಾಭವನ ದ ಜರುಗಿತು.

ಸಮಾರಂಭದ ಅಧ್ಯಕ್ಷತೆ ವಹಿಸಿ ಲಯನ್ಸ್ ಜಿಲ್ಲಾ ಮಾಜಿ ರಾಜ್ಯಪಾಲ, ಧರ್ಮದರ್ಶಿ ಹರಿಕೃಷ್ಣ ಪುನರೂರು ಮಾತನಾಡಿ, ಲಯನ್ಸ್ ಕ್ಲಬ್ ನ ಸೇವಾ ಕಾರ್ಯವೈಖರಿ ಶ್ಲಾಘಿಸಿದರು. ಜತೆಗೆ, ಸೌಲಭ್ಯ ಸದುಪಯೋಗಪಡಿಸಿಕೊಳ್ಳಿ ಎಂದು ಫಲಾನುಭವಿಗಳಿಗೆ ಕಿವಿಮಾತು ಹೇಳಿದರು.

ಮುಖ್ಯ ಅತಿಥಿಗಳಾಗಿ ಧಾರ್ಮಿಕ ಪರಿಷತ್ತು ಸದಸ್ಯ ಭುವನಾಭಿರಾಮ ಉಡುಪ, ಲಯನ್ಸ್ ಕ್ಲಬ್ ಅಧ್ಯಕ್ಷ ಸ್ಟ್ಯಾನಿ ಪಿಂಟೋ ಕಟೀಲ್, ಪ್ರತಿಭಾ ಹೆಬ್ಬಾರ್ ಮುಲ್ಕಿ, ವೆಂಕಟೇಶ್ ಹೆಬ್ಬಾರ್, ಅತಿಕಾರಿಬೆಟ್ಟು ಗ್ರಾ. ಪಂ. ಮಾಜಿ ಸದಸ್ಯ ಜೀವನ್ ಶೆಟ್ಟಿ, ದಯಾನಂದ ರೈ, ದಾಮೋದರ್ ಸಾಲಿಯಾನ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸುಮಾರು 150 ಮಂದಿ ಫಲಾನುಭವಿಗಳು ಪ್ರಯೋಜನ ಪಡೆದರು.

Edited By : Vijay Kumar
Kshetra Samachara

Kshetra Samachara

21/02/2021 10:59 pm

Cinque Terre

3.78 K

Cinque Terre

0

ಸಂಬಂಧಿತ ಸುದ್ದಿ