ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಾಣಿ ಪೆರಾಜೆಯಲ್ಲಿ ರಾಘವೇಶ್ವರ ಶ್ರೀಗಳ ಭೇಟಿಯಾಗಿ ಆಶೀರ್ವಾದ ಪಡೆದ ಸಚಿವ ಅಂಗಾರ

ಬಂಟ್ವಾಳ: ಮಾಣಿ ಪೆರಾಜೆಯ ಶ್ರೀ ರಾಮಚಂದ್ರಾಪುರ ಮಠದಲ್ಲಿ ಬಂದರು ಮತ್ತು ಮೀನುಗಾರಿಕೆ ಸಚಿವ ಎಸ್.ಅಂಗಾರ ಅವರು ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರ ಆಶೀರ್ವಾದ ಪಡೆದರು. ಬಂಟ್ವಾಳ ಶಾಸಕ ರಾಜೇಶ್ ಯು. ನಾಯ್ಕ್ ಉಪಸ್ಥಿತರಿದ್ದರು.

ಈ ಸಂದರ್ಭ ಆಶೀರ್ವಚನ ನೀಡಿದ ಶ್ರೀಗಳು, ಉತ್ತಮ ಸಮಾಜ ಸೇವೆಗೆ ಅವಕಾಶ ಹುಡುಕಿಕೊಂಡು ಬರುತ್ತವೆ ಎಂದು ಶುಭ ಹಾರೈಸಿದರು. ಈ ವೇಳೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಮಿತ್ತಪೆರಾಜೆ ಬೊಳ್ಳುಕಲ್ಲು ಮಾರ್ಗ ಅಭಿವೃದ್ಧಿಯ ಕುರಿತು ಮಾಹಿತಿ ನೀಡಿದರು.

ಈ ಸಂದರ್ಭ ಮಂಗಳೂರು ಮಂಡಲ ಮಾರ್ಗದರ್ಶನ ಸಭೆ ನಡೆಯಿತು. ನೂತನ ಗುರಿಕಾರರಿಗೆ ಸಾಠಿ ಸನದು ಪ್ರದಾನ, ಪ್ರತಿಭಾ ಪುರಸ್ಕಾರ ನಡೆಯಿತು. ಪ್ರಮುಖರಾದ ನಾಗರಾಜ ಭಟ್ ಪಿದಮಲೆ, ಶ್ರೀಕೃಷ್ಣ ಮಿನಗದ್ದೆ, ಶೈಲಜಾ ಕೆ. ಟಿ. ಭಟ್, ಅರವಿಂದ ದರ್ಬೆ, ದೇವಿಕಾ ಶಾಸ್ತ್ರಿ, ಹಾರಕರೆ ನಾರಾಯಣ ಭಟ್, ಬಂಗಾರಡ್ಕ ಜನಾರ್ದನ ಭಟ್, ಮೈಕೆ ಗಣೇಶ್ ಭಟ್ ಮೊದಲಾದವರು ಉಪಸ್ಥಿತರಿದ್ದರು. ಸುಬ್ರಹ್ಮಣ್ಯ ಭಟ್ ಸೇರಾಜೆ ನಿರೂಪಿಸಿದರು.

Edited By : Nirmala Aralikatti
Kshetra Samachara

Kshetra Samachara

15/02/2021 03:15 pm

Cinque Terre

6.13 K

Cinque Terre

0

ಸಂಬಂಧಿತ ಸುದ್ದಿ