ಮುಲ್ಕಿ: ದ.ಕ. ಹಾಗೂ ಉಡುಪಿ ಜಿಲ್ಲೆಗಳ ಬ್ಯಾರಿ ಸಂಗೀತ ಕಲಾವಿದರನ್ನೊಳಗೊಂಡ ಬ್ಯಾರಿ ಸಂಗೀತ ಕಲಾವಿದರ ಒಕ್ಕೂಟದ ರಚನಾ ಸಮಿತಿ ಸಭೆಯು ಇತ್ತೀಚೆಗೆ ಟ್ಯಾಲೆಂಟ್ ರಿಸರ್ಚ್ ಫೌಂಡೇಷನ್‌ನ ಸಭಾಂಗಣದಲ್ಲಿ ಜರುಗಿತು.
ಕವಿ ಹುಸೈನ್ ಕಾಟಿಪಳ್ಳ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಾಜ್ಯ ಆಹಾರ ಆಯೋಗದ ಮಾಜಿ ಸದಸ್ಯ ಬಿ.ಎ.ಮುಹಮ್ಮದ್ ಅಲಿ ಕಮ್ಮರಡಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾರ್ಗದರ್ಶನ ನೀಡಿದರು.
ನೂತನ ಸಮಿತಿಯ ಅಧ್ಯಕ್ಷರಾಗಿ ಗಾಯಕ ಶಮೀರ್ ಮುಲ್ಕಿ, ಗೌರವಾಧ್ಯಕ್ಷರಾಗಿ ಹುಸೈನ್ ಕಾಟಿಪಳ್ಳ, ಉಪಾಧ್ಯಕ್ಷರಾಗಿ ಇರ್ಫಾನ್ ಕುಂದಾಪುರ, ಸಮದ್ ಗಡಿಯಾರ, ಪ್ರಧಾನ ಕಾರ್ಯದರ್ಶಿಯಾಗಿ ಸರ್ಫ್ರಾಝ್ ಮಂಗಳೂರು, ಕಾರ್ಯದರ್ಶಿಯಾಗಿ ಸಿದ್ದೀಕ್ ಪಾಂಡವರಕಲ್ಲು, ಇರ್ಫಾನ್ ಬಜಾಲ್, ಸಂಚಾಲಕರಾಗಿ ಆಶ್ರಫ್ ಅಪೋಲೊ, ಕೋಶಾಧಿಕಾರಿಯಾಗಿ ರಾಝ್ ಕಲಾಯಿ, ಗೌರವ ಸಲಹೆಗಾರರಾಗಿ ಬಿ.ಎ.
ಮುಹಮ್ಮದ್ ಅಲಿ ಕಮ್ಮರಡಿ, ಬಶೀರ್ ಅಹ್ಮದ್ ಕಿನ್ಯ, ಇಬ್ರಾಹಿಂ ಬಾತಿಷ, ರಶೀದ್ ನಂದಾವರ, ಅಬು ಸಫ್ವಾನ್ ಕೈರಂಗಳ, ಮಾಧ್ಯಮ ಕಾರ್ಯದರ್ಶಿಯಾಗಿ ನೌಫಲ್ ಎನ್‌ಎಸ್‌ಜೆ, ನಿಝಾಮ್ ನೆಕ್ಕಿಲ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅನ್ವರ್ ಕೂಲ್, ತಾಜುದ್ದೀನ್ ಅಮ್ಮುಜೆ, ನಿಫಾಲ್ ಬೆದ್ರ, ಖಲೀಲ್ ಕಲ್ಕಟ್ಟ, ಸಫ್ವಾನ್ ಸಾಲೆತ್ತೂರ್, ಇಮ್‌ಝಮಾಮ್ ಕಲಾಯಿ, ಶಾಕಿಬ್ ಕಾಟಿಪಳ್ಳ, ನಿಶಾರ್ ಪಡೀಲ್, ಇರ್ಫಾನ್ ಶಮಿ ಕಲ್ಕಟ್ಟ, ಅಝರ್ ಆಶ್, ಅಲ್ತಾಫ್ ಪುತ್ತೂರು, ರಹ್ಮಾನ್ ಕೊಣಾಜೆ, ಝಕೀರ್ ಕುಳಾಯಿ, ಚಮ್ಮಿ ಎಂ.ಜೆ. ಮಂಜನಾಡಿ, ಸಫ್ವಾನ್ ಜೋಗಿಬೆಟ್ಟು, ಜಿಯಾ ಕಲ್ಲಡ್ಕ ಆಯ್ಕೆಯಾಗಿದ್ದಾರೆ.
Kshetra Samachara
11/02/2021 10:15 am