ಮುಲ್ಕಿ : ಮೊಬೈಲ್, ಇಂಟರ್‌ನೆಟ್ ಇತ್ಯಾದಿ ಮಧ್ಯೆಯೂ ಓದುವ ಸುಖ ಪುಸ್ತಕದಲ್ಲೇ ಹೆಚ್ಚು ಸಿಗುವುದು ಎಂದು ಸಾಹಿತಿ, ವಿದ್ವಾಂಸ ಕೆ.ಎಲ್.ಕುಂಡಂತಾಯ ಹೇಳಿದರು.
ಅವರು ಕಿನ್ನಿಗೋಳಿಯ ಅನಂತಪ್ರಕಾಶ ಸಂಸ್ಥೆ ತನ್ನ ಇಪ್ಪತ್ತೈದರ ಹರೆಯದ ಸಂಭ್ರಮಾಚರಣೆಗಾಗಿ ಆರಂಭಿಸಿರುವ ಪುಸ್ತಕದ ಮನೆಯನ್ನು ಐವತ್ತು ಪುಸ್ತಕಗಳನ್ನು ಕೊಡುಗೆಯಾಗಿ ನೀಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಕಟೀಲು ಪಾಂಡುರಂಗ ಭಟ್ ಮಾತನಾಡಿ, ಸಾಹಿತ್ಯಾಸಕ್ತರ ಓದುವಿಕೆಗೆ ಅವಕಾಶ, ಅಗತ್ಯ ಪುಸ್ತಕಗಳ ಕೊಳ್ಳುವಿಕೆಗೆ ಅವಕಾಶವೊಂದನ್ನು ಸಾಹಿತ್ಯ- ಸಾಂಸ್ಕೃತಿಕ ಕ್ಷೇತ್ರದಲ್ಲಿ ಹೆಸರು ಮಾಡಿರುವ ಪುಟ್ಟ ಕಿನ್ನಿಗೋಳಿಯ ಅನಂತಪ್ರಕಾಶ ಇನ್ನಷ್ಟು ಸಾಹಿತ್ಯ ಕೃತಿಗಳನ್ನು ಪ್ರಕಟಿಸಲಿ. ಈ ಪುಸ್ತಕದ ಮನೆ ಯಕ್ಷಗಾನ, ತುಳು ಮುಂತಾದ ವಿಚಾರಗಳ ಅಧ್ಯಯನಕಾರರಿಗೆ ಸಹಕಾರಿಯಾಗಲಿ ಎಂದರು.
ಓದುಗ ಬಳಗದ ಕುಕ್ಕಟ್ಟೆ ದೇವದಾಸ ಮಲ್ಯ, ಪುರುಷೋತ್ತಮ ಕೋಟ್ಯಾನ್, ನಿವೃತ್ತ ಶಿಕ್ಷಕ ಬಾಲಕೃಷ್ಣ ಉಡುಪ ಶುಭ ಹಾರೈಸಿದರು. ಅನಂತ ಪ್ರಕಾಶದ ನಿರ್ದೇಶಕ ಕೊಡೆತ್ತೂರು ಸಚ್ಚಿದಾನಂದ ಉಡುಪ ಸ್ವಾಗತಿಸಿದರು. ಗಾಯತ್ರೀ ಎಸ್. ಉಡುಪ ವಂದಿಸಿದರು.
Kshetra Samachara
28/01/2021 08:26 pm