ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಕಟೀಲು ಶ್ರೀ ರಜಕ ಸಮಾಜ ಸೇವಾ ಸಂಘ ಉದ್ಘಾಟನೆ, ಲಾಂಛನ ಬಿಡುಗಡೆ

ಮುಲ್ಕಿ: ಕಟೀಲು ಶ್ರೀ ರಜಕಸಮಾಜ ಸೇವಾ ಸೇವಾ ಸಂಘದ ಉದ್ಘಾಟನೆ ಹಾಗೂ ಲಾಂಛನ ಬಿಡುಗಡೆ ಸಮಾರಂಭ ಕಟೀಲು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಕ್ಷೀರಸಾಗರ ಸಭಾಂಗಣದಲ್ಲಿ ನಡೆಯಿತು.

ಸಮಾರಂಭವನ್ನು ಕರ್ನಾಟಕ ಸರ್ಕಾರದ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ರಘು ಕೌಟಿಲ್ಯ ಉದ್ಘಾಟಿಸಿದರು. ಸಭೆಯ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಮಡಿವಾಳ ಸಂಘ ಬೆಂಗಳೂರಿನ ಕಾರ್ಯಾಧ್ಯಕ್ಷ ಬಿ.ರಂಗಸ್ವಾಮಯ್ಯ ವಹಿಸಿದ್ದರು. ಬಳ್ಳಾರಿ ಹರಪನಹಳ್ಳಿ ಪುರಸಭಾ ಸದಸ್ಯರಾದ ಎಚ್.ಎಂ.ಅಶೋಕ್ ಲಾಂಛನ ಬಿಡುಗಡೆ ಮಾಡಿದರು.

ಸಮಾರಂಭದ ಮುಖ್ಯ ಅತಿಥಿಯಾಗಿ ಕರ್ನಾಟಕ ರಾಜ್ಯ ಮಡಿವಾಳರ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯ ಸಂಜೀವ ಮಡಿವಾಳ ಕಟೀಲು, ಕರ್ನಾಟಕದ ರಾಜ್ಮಡಿವಾಳಯ ಕ್ಷೇಮಾಭಿವೃಧಿ ಸಂಘದ ಪ್ರಚಾರ ಸಮಿತಿಯ ಅಧ್ಯಕ್ಷ ಪ್ರಭಾಕರ ಮತ್ತು ಕರ್ನಾಟಕ ರಾಜ್ಯ ಮಡಿವಾಳ ಮಹಿಳಾ ಸಂಘ ಬೆಂಗಳೂರಿನ ಅಧ್ಯಕ್ಷೆ ವಿಜಯ ಲಕ್ಷ್ಮೀ ಅಂಜನಪ್ಪ ಉಪಸ್ಥಿತರಿದ್ದರು.

ಈ ವೇಳೆ ಕರ್ನಾಟಕ ಸರ್ಕಾರದ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಅಧ್ಯಕ್ಷ ರಘು ಕೌಟಿಲ್ಯ ಅವರಿಗೆ ಸನ್ಮಾನ ಮಾಡಲಾಯಿತು. ಮಾಡಿವಾಳ ಸಮಾಜದ ಬಂದುಗಳು ಗ್ರಾಮ ಪಂಚಾಯತ್ ಸದಸ್ಯರಾಗಿ ವಿಚೇತರಾದವರನ್ನು ಗೌರವಿಸಲಾಯಿತು. ದೈವಾರಧನೆಯಲ್ಲಿ ತೊಡಗಿಸಿಕೊಂಡ ಸಾಧಕರನ್ನು ಗೌರವಿಸಲಾಯಿತು.

Edited By : Vijay Kumar
Kshetra Samachara

Kshetra Samachara

25/01/2021 11:02 am

Cinque Terre

4.1 K

Cinque Terre

1

ಸಂಬಂಧಿತ ಸುದ್ದಿ