ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಮಕ್ಕಳ ನಾಟಕದ ರಂಗ ಪರಿಕರ ಕಾರ್ಯಾಗಾರ ಉದ್ಘಾಟನೆ

ಮಂಗಳೂರು: ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ನಗರದ ಬೈಕಂಪಾಡಿ ವಿದ್ಯಾರ್ಥಿ ಸಂಘದ ಸಭಾಭವನದಲ್ಲಿ ನಡೆಯುವ ಎರಡು ದಿನದ ಮಕ್ಕಳ ನಾಟಕದ ರಂಗ ಪರಿಕರ ಕಾರ್ಯಾಗಾರವನ್ನು ರೋಟರಿ ಮಂಗಳೂರು ಪೂರ್ವದ ಅಧ್ಯಕ್ಷ ಎನ್.ವಿನೋದ್ ಕುಡ್ವ ಇಂದು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಮಕ್ಕಳಿಗೆ ರಂಗಭೂಮಿಯ ಮೂಲಕ ಕಲಿಕೆಗೆ, ಸೃಜನಶೀಲತೆಗೆ ಸಾಕಷ್ಟು ಅವಕಾಶಗಳಿವೆ. ಈ ಹಿನ್ನೆಲೆಯಲ್ಲಿ ಮಕ್ಕಳ ರಂಗಭೂಮಿ ಮತ್ತಷ್ಟು ಬೆಳೆಯಲಿ ಎಂದು ಹಾರೈಸಿದರು.

ರಂಗನಟಿ, ಸಂಘಟಕಿ ಆರತಿ ಆಳ್ವ ಬಜಾಲ್, ರಂಗಸಂಗಾತಿಯ ಸಂಚಾಲಕ ಕರುಣಾಕರ ಶೆಟ್ಟಿ, ಶಿಕ್ಷಕ ಪ್ರೇಮನಾಥ ಮರ್ಣೆ, ಕಾರ್ಯಾಗಾರದ ನಿರ್ದೇಶಕ ಮೈಮ್ ರಾಮ್‌ದಾಸ್ ಮತ್ತಿತರರು ಉಪಸ್ಥಿತರಿದ್ದರು.

Edited By : Nagaraj Tulugeri
Kshetra Samachara

Kshetra Samachara

24/01/2021 08:25 pm

Cinque Terre

4.92 K

Cinque Terre

0

ಸಂಬಂಧಿತ ಸುದ್ದಿ