ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಂಟೇ ದಿನಗಳಲ್ಲಿ ಸಿದ್ಧಗೊಂಡ ಕೊರಗಜ್ಜನ ಗುಡಿ

ಬಂಟ್ವಾಳ: ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಪಚ್ಚಿನಡ್ಕದಲ್ಲಿ ಶಿಲಾಮಯ ಕೊರಗಜ್ಜನ ಗುಡಿಯೊಂದು ಬರೀ 8ದಿನಗಳಲ್ಲಿ ಸಿದ್ಧಗೊಂಡು ಗಮನ ಸೆಳೆದಿದೆ.

ಸಾಮಾನ್ಯವಾಗಿ ಶಿಲಾಮಯ ಗುಡಿ ನಿರ್ಮಾಣ ಮಾಡಬೇಕಾದರೆ ಹೆಚ್ಚಿನ ಸಮಯ ಬೇಕಿದ್ದು, ಶಿಲ್ಪಿ ಹೇಳುವ ಪ್ರಕಾರ ಇಂತಹ ಗುಡಿ ನಿರ್ಮಾಣವಾಗಬೇಕಾದರೆ ಕನಿಷ್ಠ ಒಂದು ತಿಂಗಳಾದರೂ ಬೇಕಾಗುತ್ತದೆ. ಆದರೆ ಈ ಗುಡಿಯ ಕಲ್ಲಿನ ಕಾರ್ಯ ಬರೀ 8 ದಿನಗಳಲ್ಲಿ ಪೂರ್ಣಗೊಂಡಿದ್ದು, 9ನೇ ದಿನ ಮೇಲ್ಛಾವಣಿಯ ಕಾರ್ಯವೂ ಪೂರ್ಣಗೊಂಡಿದೆ. ಬಂಟ್ವಾಳದ ವಾಸ್ತುಶಿಲ್ಪಿ ಬಸ್ತಿ ಸದಾಶಿವ ಶೆಣೈ ಅವರ ನೇತೃತ್ವದಲ್ಲಿ ಇದರ ಕಾರ್ಯ ನಡೆದಿದ್ದು, ಹಿರಿಯರಾದ ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ ಅವರ ಮುಂದಾಳತ್ವ ವಹಿಸಿದ್ದರು. ಕಲ್ಲಿನ ಕೆಲಸ ಮೇಸ್ತ್ರಿ ರಮೇಶ್ ಆರ್.ಲಾಯಿಲ ಹಾಗೂ ನಾಗೇಂದ್ರ ಆಚಾರ್ಯ ಬಂಟ್ವಾಳ ಅವರು ಮರದ ಕಾರ್ಯ ನಿರ್ವಹಿಸಿದ್ದಾರೆ.

ಜ. 11ರಂದು ಕಾಮಗಾರಿ ಆರಂಭಗೊಂಡಿದ್ದು, ಜ. 18 ಕ್ಕೆ ಶಿಲೆಯ ಕೆಲಸಗಳು ಪೂರ್ಣಗೊಂಡಿದ್ದವು. ಜ. 19ರಂದು ಮೇಲ್ಛಾವಣಿಯ ಕೆಲಸ ಕೂಡ ಪೂರ್ಣಗೊಂಡಿದೆ. ಸರಾಸರಿ ೮ ಮಂದಿ ಕೆಲಸಗಾರರು ಕಾಮಗಾರಿ ನಿರ್ವಹಿಸಿದ್ದು, 2 ದಿನಗಳು ಮಾತ್ರ ರಾತ್ರಿ ಕಾಮಗಾರಿ ನಡೆಸಿದ್ದಾರೆ. ಶಿಲಾಮಯ ಗುಡಿಗಳು ಕನಿಷ್ಠ ಅವಧಿಯಲ್ಲಿ ಪೂರ್ಣಗೊಳ್ಳುವುದು ಅಪರೂಪವಾಗಿದ್ದು, ಆದರೆ ಇಲ್ಲಿ ಎಂಟು ಅಡಿ ಸುತ್ತಳತೆಯ 10 ಅಡಿ ೪ ಇಂಚು ಉದ್ದದ ಕಲ್ಲಿನ ಗುಡಿ ನಿರ್ಮಾಣವಾಗಿದೆ. ತಾನು ಅನೇಕ ದೇವಸ್ಥಾನಗಳ ಕೆಲಸ ನಿರ್ವಹಿಸಿದ್ದು, ಆದರೆ ಇಷ್ಟು ಕನಿಷ್ಠ ಅವಽಯಲ್ಲಿ ಕೆಲಸ ಮುಗಿಸಿರುವುದು ಇದೇ ಮೊದಲು. ಹಿಂದೊಮ್ಮೆ ಬಂಟ್ವಾಳದಲ್ಲಿ ೨೪ ದಿನಗಳಲ್ಲಿ ಇಂತಹ ಗುಡಿ ನಿರ್ಮಿಸಿದ್ದೆವು ಎಂದು ವಾಸ್ತುಶಿಲ್ಪಿ ಬಸ್ತಿ ಸದಾಶಿವ ಶೆಣೈ ಹೇಳುತ್ತಾರೆ.

Edited By : Nirmala Aralikatti
Kshetra Samachara

Kshetra Samachara

20/01/2021 09:56 pm

Cinque Terre

3.69 K

Cinque Terre

0

ಸಂಬಂಧಿತ ಸುದ್ದಿ