ಮಂಗಳೂರು:ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕುಂಜತ್ತಬೈಲ್ ಉತ್ತರ 13 ನೇ ವಾರ್ಡಿನಲ್ಲಿ ಸರಕಾರದ ಜಲಸಿರಿ ಯೋಜನೆಯಡಿ ಎಡಿಬಿ ನೆರವಿನ 24*7 ನಿರಂತರ ನೀರು ಸರಬರಾಜು ಮೇಲ್ಪಟ್ಟ ಜಲ ಸಂಗ್ರಹಗಾರದ ಭೂಮಿ ಪೂಜೆಯನ್ನು ಶಾಸಕರಾದ ಡಾ.ವೈ ಭರತ್ ಶೆಟ್ಟಿಯವರು ಶನಿವಾರ ಮೇಯರ್ ದಿವಾಕರ ಪಾಂಡೇಶ್ವರ್ ಅವರ ಉಪಸ್ಥಿತಿಯಲ್ಲಿ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಉಪಮೇಯರ್ ವೇದಾವತಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಶರತ್ ಕುಂಜತ್ತಬೈಲ್, ಕಾರ್ಪೊರೇಟರ್ ಲೋಹಿತ್ ಅಮೀನ್, ಪಕ್ಷದ ಪ್ರಮುಖರು, ಕಾರ್ಯಕರ್ತರು ಜೊತೆಗಿದ್ದರು.
Kshetra Samachara
17/01/2021 03:51 pm