ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುರತ್ಕಲ್: ದೀಪಕ್ ರಾವ್ ಸ್ಮರಣಾರ್ಥ ಅಶಕ್ತರಿಗೆ ಗಾಲಿ ಕುರ್ಚಿ ವಿತರಣೆ

ಮುಲ್ಕಿ: ಮೂರು ವರ್ಷಗಳ ಹಿಂದೆ ಮತಾಂಧರ ರಕ್ತದಾಹಕ್ಕೆ ಬಲಿಯಾಗಿದ್ದ ದೀಪಕ್ ರಾವ್ ಅವರ ಬಲಿದಾನದ ನೆನಪನ್ನು ಚಿರಸ್ಥಾಯಿಯನ್ನಾಗಿಸುವಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪರಿವಾರ ಸಂಘಟನೆ ಸಕ್ಷಮ ಕಾಟಿಪಳ್ಳ ಗಣೇಶಪುರ ನೇತೃತ್ವದಲ್ಲಿ ಭಾನುವಾರ ದೀಪಕ್ ರಾವ್ ಅಗಲಿದ ದಿನದಂದು ಮಾದರಿ ಕಾರ್ಯ ನಡೆಯಿತು.

ಸುರತ್ಕಲ್ ಆಶ್ರಯ ಕಾಲೊನಿಯ ಜನಾರ್ದನ ನಾಯ್ಕ್ ಸಹಿತ ನಾಲ್ಕು ಬಡ ಕುಟುಂಬಗಳ ವಿಶೇಷಚೇತನರ ಮನೆಗೆ ತೆರಳಿದ ಶಾಸಕ ಡಾ.ವೈ. ಭರತ್ ಶೆಟ್ಟಿಯವರು ದೀಪಕ್ ರಾವ್ ಅವರ ತಾಯಿ ಪ್ರೇಮಾ ಅವರ ಮೂಲಕ ಗಾಲಿ ಕುರ್ಚಿಗಳನ್ನು ಹಸ್ತಾಂತರಿಸಿದರು. ಈ ಸಂದರ್ಭ ಪಾಲಿಕೆ ಸದಸ್ಯ ಲೋಕೇಶ್ ಬೊಳ್ಳಾಜೆ, ಯುವ ಮೋರ್ಚಾ ಅಧ್ಯಕ್ಷ ಭರತ್ ರಾಜ್ ಕೃಷ್ಣಾಪುರ ಸಹಿತ ಈ ಸಮಾಜಮುಖಿ ಕಾರ್ಯದಲ್ಲಿ ಕೈಜೋಡಿಸಿದ ದಾನಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

Edited By : Vijay Kumar
Kshetra Samachara

Kshetra Samachara

03/01/2021 11:08 pm

Cinque Terre

3.33 K

Cinque Terre

1

ಸಂಬಂಧಿತ ಸುದ್ದಿ