ಬಂಟ್ವಾಳ: ತಾಜುಲ್ ಉಲಮಾ ಸುನ್ನಿ ಸೆಂಟರ್ ಕುಕ್ಕಾಜೆ ಕಾಪಿಕಾಡು ವತಿಯಿಂದ ರಾತೀಬು ನೇರ್ಚೆ ಮತ್ತು ತಾಜುಲ್ ಉಲಮಾ, ಅಗಲಿದ ನೇತಾರರ ಅನುಸ್ಮರಣಾ ಸಂಗಮದ ಕಾರ್ಯಕ್ರಮ ನಡೆಯಿತು.
ಧರ್ಮವನ್ನು ಉಳಿಸಿ ಬೆಳೆಸುವಲ್ಲಿ ಮಹತ್ತರ ಪಾತ್ರ ನಿರ್ವಹಿಸಿದ್ದ ಧಾರ್ಮಿಕ ನಾಯಕರ ಹಾದಿ ಸತ್ಯ ಪಥವಾಗಿದ್ದು ಸಂಘಟನೆಯ ಮೂಲಕ ತೊಡಗಿಸಿಕೊಂಡು ಇವರ ಅನುಸ್ಮರಣೆ ಮಾಡಬೇಕು. ಈ ಮೂಲಕ ವಿಜಯದ ಹಾದಿಯಲ್ಲಿ ಮುನ್ನಡೆಯಬೇಕೆಂದು ಅಸಯ್ಯದ್ ಮುಸ್ತಾಕುಲ್ ರಹಿಮಾನ್ ತಂಗಳ್ ಚಟಕ್ಕಲ್ ಈ ಸಂದರ್ಭ ಸಂದೇಶ ನೀಡಿದರು.
ಕೆ.ಎಂ.ಅಬೂಬಕ್ಕರ್ ಮುಸ್ಲಿಯಾರ್, ಮಹಮ್ಮದ್ ಮುಸ್ಲಿಯಾರ್ ಕುಕ್ಕಾಜೆ, ಅಬ್ಬಾಸ್ ಮುಸ್ಲಿಯಾರ್ ಕಲ್ಲಮರಾಯಿ, ಟಿ ಉಮ್ಮರ್ ಮುಸ್ಲಿಯಾರ್, ಸಿದ್ದೀಕ್ ಮುಸ್ಲಿಯಾರ್ ಕುಕ್ಕಾಜೆ, ಅಬ್ದುಲ್ ರಝಕ್ ಮುಸ್ಲಿಯಾರ್ ಗೇರುಪಡ್ಪು, ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷರಾದ ಅಬ್ದುಲ್ ರಝಕ್ ಕುಕ್ಕಾಜೆ ಇನ್ನಿತರ ಸಾಮಾಜಿಕ ಧಾರ್ಮಿಕ ನಾಯಕರು ಉಪಸ್ಥಿತರಿದ್ದರು.
Kshetra Samachara
06/12/2020 04:09 pm