ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: ಭಗವದ್ಗೀತೆಯಲ್ಲಿ ಜೀವನದ ಎಲ್ಲ ಪ್ರಶ್ನೆಗಳಿಗೂ ಉತ್ತರ; ಸ್ವಾಮಿ ಸನಂದನ ದಾಸ

ಮೂಡುಬಿದಿರೆ: ಜೀವನದಲ್ಲಿ ದುಃಖದ ನಿವಾರಣೆ ನಮ್ಮೆಲ್ಲರ ಪ್ರಯತ್ನವಾಗಿರುತ್ತದೆ. ಭಗವಂತನ ಪ್ರಸಾದ ಎಲ್ಲ ಆಪತ್ತನ್ನೂ ಪರಿಹರಿಸುವ ಶಕ್ತಿ ಹೊಂದಿದ್ದು, ಭಗವಂತನ ದರ್ಶನ ಮತ್ತು ಅವನ ಪ್ರಸಾದದಿಂದ ನಮಗೆ ಸಾರ್ಥಕತೆ ಸಿಗುತ್ತದೆ.

ಜೀವನದ ಎಲ್ಲ ಪ್ರಶ್ನೆಗಳಿಗೂ ಭಗವದ್ಗೀತೆಯಲ್ಲಿ ಉತ್ತರವಿದೆ. ಏಕೆಂದರೆ ಪ್ರಕೃತಿ ಕೂಡ ಪರಮಾತ್ಮನ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಇಸ್ಕಾನ್ ಮಂಗಳೂರಿನ ಸ್ವಾಮಿ ಸನಂದನ ದಾಸ ನುಡಿದರು. ಅವರು ಮೂಡುವೇಣುಪುರ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಜಿ.ಎಸ್ .ಬಿ. ಸಭಾ ಕೋಡಿಕಲ್ ಮತ್ತು ಇಸ್ಕಾನ್ ಮಂಗಳೂರು ವತಿಯಿಂದ ನಡೆದ

ಅಕ್ಷಯ ಪಾತ್ರ ಪ್ರಸಾದ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಕಿಟ್ ವಿತರಿಸಿ

ಆಶೀರ್ವಚನ ನೀಡಿದರು.

ಶ್ರೀ ವೆಂಕಟರಮಣ ಮತ್ತು ಶ್ರೀ ಹನುಮಂತ ದೇವಸ್ಥಾನದ ಆಡಳಿತ ಮೊಕ್ತೇಸರ ಜಿ. ಉಮೇಶ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಜಿ.ಎಸ್.ಬಿ. ಸಭಾ ಕೋಡಿಕಲ್ ಅಧ್ಯಕ್ಷ ಗಣೇಶ್ ಕಾಮತ್, ಉದ್ಯಮಿ ಕುಂಬ್ಳೆ ನರಸಿಂಹ ಪ್ರಭು ಮಂಗಳೂರು ಹಾಗೂ

ಶ್ರೀ ವೆಂಕಟ್ರಮಣ ಮತ್ತು ಶ್ರೀ ಹನುಮಂತ ದೇವಸ್ಥಾನದ ಮೊಕ್ತೇಸರರು ಉಪಸ್ಥಿತರಿದ್ದರು.

ಮೊಕ್ತೇಸರ, ಕಾರ್ಯಕ್ರಮ ಸಂಯೋಜಕ ಟಿ.ರಘುವೀರ ಶೆಣೈ ಕಾರ್ಯಕ್ರಮ ನಿರ್ವಹಿಸಿದರು. ಶಿವಾನಂದ ಪ್ರಭು ವಂದಿಸಿದರು.

ಜಿ.ಎಸ್.ಬಿ. ಸಮಾಜದ 70ಕ್ಕೂ ಅಧಿಕ ಮಂದಿಗೆ ಅಕ್ಷಯ ಪಾತ್ರ ಪ್ರಸಾದ ಕಿಟ್ ವಿತರಿಸಲಾಯಿತು.

Edited By : Nirmala Aralikatti
Kshetra Samachara

Kshetra Samachara

29/11/2020 01:52 pm

Cinque Terre

2.51 K

Cinque Terre

0

ಸಂಬಂಧಿತ ಸುದ್ದಿ