ಮಂಗಳೂರು: 'ಕಡಲ ಪುಡೆತ್ತ ಉಡಲ ಗೇನ..' ಎಂದು ನಿಷ್ಕಲ್ಮಶ ಭಕ್ತಿ ಹಾಗೂ ತನ್ಮಯತೆಯಿಂದ ಹಾಡಿದ ಬಾಲ ಪ್ರತಿಭೆ ಮಾ.ಕಾರ್ತಿಕ್ ಗೆ ಶನಿವಾರ ತುಳು ಸಾಹಿತ್ಯ ಅಕಾಡೆಮಿಯ ಸಿರಿಚಾವಡಿಯಲ್ಲಿ "ತುಳುವ ಕುರಲ್" ಬಿರುದು ಪ್ರದಾನ ಮಾಡಿ ಗೌರವಿಸಲಾಯಿತು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಟೈಮ್ಸ್ ಆಫ್ ಕುಡ್ಲ ತುಳು ಪತ್ರಿಕೆ, ರೋಟರಿ ಕ್ಲಬ್ ಮುಲ್ಕಿ ಮತ್ತು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ತೋಕೂರು ಹಳೆಯಂಗಡಿ ವತಿಯಿಂದ ನಡೆದ ತುಳುನಾಡ ತುತ್ತೈತ ಜೋಕುಲೆನ ಭಾವಚಿತ್ರ ಪಂಥದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಿರುದು ಪ್ರದಾನ ನಡೆಯಿತು.
ರೋಟರಿ 3181ರ ಜಿಲ್ಲಾ ಗವರ್ನರ್ ರಂಗನಾಥ್ ಭಟ್ ಮತ್ತು ರಜನಿ ರಂಗನಾಥ್ ಭಟ್ ಕಾರ್ತಿಕ್ ನ ಆರೋಗ್ಯದ ಕಾಳಜಿಗೆ 25 ಸಾವಿರ ರೂ. ಕೊಡುಗೆ ಪ್ರಕಟಿಸಿದರು. ತುಳು ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್ 5000 ರೂ. ಚೆಕ್ ನೀಡಿದರು. ಬಾಲನಟ ಅಚಿಂತ್ಯಾ ಪುರಾಣಿಕ್ ಅವರನ್ನೂ ಈ ಸಂದರ್ಭ ಸನ್ಮಾನಿಸಲಾಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದ ವಿಶೇಷ ಚೇತನ ಮಗು ಪ್ರಾರ್ಥನ್, ಅಜ್ಜಿಯ ವೇಷ ಹಾಕಿದ್ದ ಜ್ಞಾನಿಕ ಪಿ.ಎಸ್.ಕರ್ಕೇರ ಅವರನ್ನು ಗೌರವಿಸಲಾಯಿತು.
ತುಳುನಾಡ ತುತ್ತೈತ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಲತೀಶ್ ಎಚ್.ಕುಮಾರ್, ದ್ವಿತೀಯ ಬಹುಮಾನ ಯುಕ್ತಿ ಎನ್.ಪ್ರಸಾದ್, ತೃತೀಯ ಬಹುಮಾನ ಜಶ್ವಿ ಆರ್.ಕುಲಾಲ್, ಚತುರ್ಥ ಬಹುಮಾನ ಅದಿತ್ರಿ ಬೆಳುವಾಯಿ, ಐದನೇ ಬಹುಮಾನ ಮೋಕ್ಷಿತಾ ಪಿ.ಎನ್., ಆರನೇ ಬಹುಮಾನ ಸಾಕ್ಷಿ, ಏಳನೇ ಬಹುಮಾನ ಕೆ.ಶೌರ್ಯ ಬಿ.ಕಾಮತ್, ಎಂಟನೇ ಬಹುಮಾನ ಇಶಾನ್ ಭಟ್ ಪಡೆದರು.
ಟೈಮ್ಸ್ ಆಫ್ ಕುಡ್ಲ ಪ್ರಧಾನ ಸಂಪಾದಕ ಎಸ್.ಆರ್. ಬಂಡಿಮಾರ್, ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಸಂತೋಷ್ ದೇವಾಡಿಗ, ಎಂ.ನಾರಾಯಣ್, ರೋಟರಿ ಕ್ಲಬ್ ಮಾಜಿ ಕಾರ್ಯದರ್ಶಿ ನಿಟ್ಟೆ ಶಶಿಧರ್ ಶೆಟ್ಟಿ, ಅಕಾಡೆಮಿ ಸದಸ್ಯರಾದ ಕಡಬ ದಿನೇಶ್ ರೈ, ಲೀಲಾಕ್ಷ ಕರ್ಕೇರ, ಚೇತಕ್ ಪೂಜಾರಿ, ಸಂತೋಷ್ ಪೂಜಾರಿ ಕಾರ್ಕಳ ಮತ್ತಿತರರು ಭಾಗವಹಿಸಿದ್ದರು. ಮುಲ್ಕಿ ರೋಟರಿ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ತುಳು ಅಕಾಡೆಮಿ ಸದಸ್ಯ ಸಂಚಾಲಕ ನರೇಂದ್ರ ಕೆರೆಕಾಡು ಕಾರ್ಯಕ್ರಮ ನಿರ್ವಹಿಸಿದರು. ಸಂತೋಷ್ ದೇವಾಡಿಗ ವಂದಿಸಿದರು.
Kshetra Samachara
22/11/2020 11:15 am