ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಳೆಯಂಗಡಿ: ಮಕ್ಕಳ ದಿನಾಚರಣೆ; ಚಿತ್ರಕಲೆ ಸ್ಪರ್ಧೆ

ಮುಲ್ಕಿ: ಭಾರತ ಸರಕಾರ, ನೆಹರು ಯುವ ಕೇಂದ್ರ ಮಂಗಳೂರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು, ಪ್ರಪ್ರಥಮ 1979-80, 1988-89 ಮತ್ತು 2015-16 ನೇ ಸಾಲಿನ ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ಹಳೆಯಂಗಡಿ ವಿದ್ಯಾವಿನಾಯಕ ಯುವಕ ಮಂಡಲ ಆಶ್ರಯದಲ್ಲಿ ಯುವಕ ಮಂಡಲದ ಸುವರ್ಣ ಮಹೋತ್ಸವದ ಅಂಗವಾಗಿ ಶ್ರೀ ವಿದ್ಯಾ ವಿನಾಯಕ ರಜತ ಸೇವಾ ಟ್ರಸ್ಟ್ ಸುವರ್ಣ ಮಹೋತ್ಸವ ಸಮಿತಿ, ಶ್ರೀ ವಿದ್ಯಾ ವಿನಾಯಕ ಯುವಕ ಮಂಡಲ, ಹಳೆಯಂಗಡಿ, ಜಿಲ್ಲಾ ಪ್ರಶಸ್ತಿ ವಿಜೇತ, ಯುವತಿ ಮತ್ತು ಮಹಿಳಾಮಂಡಲ ಹಳೆಯಂಗಡಿ, ಸಹಕಾರದಲ್ಲಿ ಹಳೆಯಂಗಡಿ, ಪಾವಂಜೆ ಮತ್ತು ಪಡುಪಣಂಬೂರು ವಿದ್ಯಾರ್ಥಿಗಳಿಗೆ ಮಕ್ಕಳ ದಿನಾಚರಣೆ ಪ್ರಯುಕ್ತ ಯುವಕ ಮಂಡಲ ಸಭಾಂಗಣದಲ್ಲಿ ನಡೆದ ಚಿತ್ರಕಲಾ ಸ್ಪರ್ಧೆ – 2020 ನಡೆಯಿತು.

ಹೋಟೆಲ್ ಸಾಯಿಲೀಲಾ ಮತ್ತು ಸಾಯಿ ಬಜಾರ್ ಮಾಲಕ ಜಗನ್ನಾಥ ವಿ. ಸಾಲ್ಯಾನ್ ಉದ್ಘಾಟಿಸಿದರು. ಜಿಪಂ ಸದಸ್ಯ ವಿನೋದ್ ಬೋಳೂರು ಅಧ್ಯಕ್ಷತೆ ವಹಿಸಿದ್ದರು.

ತಾಪಂ ಸದಸ್ಯ ಜೀವನ್ ಪ್ರಕಾಶ್ ಕಾಮೆರೊಟ್ಟು, ನೆಹರೂ ಯುವ ಕೇಂದ್ರ ಮಂಗಳೂರು ಪ್ರತಿನಿಧಿಗಳಾದ ಪ್ರೀತೇಶ್ ಸೋನಲಿಕೆ ಮಂಗಳೂರು, ಸುಶ್ಮಿತಾ ಬಿ. ಆರ್. ಮೂಡಬಿದ್ರೆ, ಯುವಕ ಮಂಡಲ ಅಧ್ಯಕ್ಷ ಯತೀಶ್ ಕೋಟ್ಯಾನ್, ಸುವರ್ಣ ಮಹೋತ್ಸವ ಸಮಿತಿ ಕಾರ್ಯಾಧ್ಯಕ್ಷ ಸುಧಾಕರ ಆರ್. ಅಮೀನ್, ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಸ್ಟ್ಯಾನಿ ಡಿಕೋಸ್ಟಾ, ಸಲಹಾ ಸಮಿತಿ ಅಧ್ಯಕ್ಷ ಸದಾಶಿವ ಅಂಚನ್, ಯುವತಿ ಮಂಡಲ ಅಧ್ಯಕ್ಷೆ ದಿವ್ಯಶ್ರೀ ರಮೇಶ್ ಕೋಟ್ಯಾನ್, ಸುವರ್ಣ ಮಹೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ರಾಮದಾಸ್ ಪಾವಂಜೆ ಉಪಸ್ಥಿತರಿದ್ದರು.

1 ನೇ ತರಗತಿಯಿಂದ 4 ನೇ ತರಗತಿ, 5 ನೇ ತರಗತಿಯಿಂದ 7 ನೇ ತರಗತಿ, 8ನೇ ತರಗತಿಯಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗೆ “ಸ್ವಚ್ಛ ಗ್ರಾಮ”, “ನನ್ನ ಕಲ್ಪನೆಯಲ್ಲಿ ಕೊರೊನಾ ಗೆಲ್ಲುವ ಬಗ್ಗೆ”, “ಫಿಟ್ ಇಂಡಿಯಾ ಹೀಗಿರಬೇಕು” ಎಂಬ ವಿಷಯದಲ್ಲಿ ಚಿತ್ರ ಸ್ಪರ್ಧೆ ನಡೆಯಿತು.

ಯುವಕ ಮಂಡಲ ಅಧ್ಯಕ್ಷ ಯತೀಶ್ ಕೋಟ್ಯಾನ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಇಂದೂಧರ ಕಿಣಿ ವಂದಿಸಿದರು. ಸುವರ್ಣ ಮಹೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ರಾಮದಾಸ್ ಪಾವಂಜೆ ನಿರೂಪಿಸಿದರು.

Edited By : Vijay Kumar
Kshetra Samachara

Kshetra Samachara

16/11/2020 03:32 pm

Cinque Terre

2.45 K

Cinque Terre

0

ಸಂಬಂಧಿತ ಸುದ್ದಿ