ಬಂಟ್ವಾಳ: ಮರ್ಹೂಮ್ ಉಮ್ಮರ್ ಫಾರೂಕ್ ಕಲ್ಲಡ್ಕ ಸ್ಮರಣಾರ್ಥ ಝಮಾನ್ ಬಾಯ್ಸ್ ಕಲ್ಲಡ್ಕ, ಬ್ಲಡ್ ಡೋನರ್ಸ್ ಮಂಗಳೂರು ಹಾಗೂ ಇಂಡಿಯನ್ ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್ ಸಂಯುಕ್ತ ಆಶ್ರಯದಲ್ಲಿ ರಕ್ತದಾನ ಶಿಬಿರ ಕಲ್ಲಡ್ಕದ ಸರಕಾರಿ ಶಾಲೆಯಲ್ಲಿ ನಡೆಯಿತು.
ಕಲ್ಲಡ್ಕ ಕೇಂದ್ರ ಜುಮಾ ಮಸೀದಿ ಮುದರ್ರಿಸ್ ಶೇಕ್ ಮಹಮ್ಮದ್ ಇರ್ಫಾನಿ ಉದ್ಘಾಟಿಸಿದರು. ಕಲ್ಲಡ್ಕ ಝಮಾನ್ ಬಾಯ್ಸ್ ಅಧ್ಯಕ್ಷ ಮುನಾಝ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಸಿದ್ದೀಕ್ ಪನಾಮ, ಮರ್ಹೂಮ್ ಫಾರೂಕ್ ಅವರ ಸಹೋದರ ತೌಫೀಕ್ ಕಲ್ಲಡ್ಕ, ಬ್ಲಡ್ ಡೋನರ್ಸ್ ಅಧ್ಯಕ್ಷ ಸಿದ್ದೀಕ್ ಮಂಜೇಶ್ವರ, ರಕ್ತದಾನಿ ಹಕೀಂ ಇಸ್ಮಾಯಿಲ್ ನಗರ, ಫಲುಲ್ ಕಲ್ಲಡ್ಕ ಮೊದಲಾದವರು ಉಪಸ್ಥಿತರಿದ್ದರು. ಶಿಬಿರದಲ್ಲಿ 205 ಯುನಿಟ್ ರಕ್ತ ಸಂಗ್ರಹಿಸಲಾಯಿತು.
Kshetra Samachara
16/11/2020 12:19 pm