ಬಂಟ್ವಾಳ: ನಿಸ್ವಾರ್ಥ ಸೇವೆ, ಸಹಕಾರ, ರಾಷ್ಟ್ರ ಜಾಗೃತಿ ಮೂಲಕ ಯುವಶಕ್ತಿ ನಿರ್ಮಾಣ ಮುಂತಾದ ಹತ್ತು ಹಲವು ಪ್ರಾಮಾಣಿಕ ಸೇವಾ ಗುಣಗಳಿಂದ ನೆತ್ರಕೆರೆ ನವೋದಯ ಮಿತ್ರಕಲಾ ವೃಂದಕ್ಕೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದರು.
ಬಂಟ್ವಾಳ ತಾಲೂಕು ಕಳ್ಳಿಗೆ ಗ್ರಾಮದ ನವೋದಯ ಮಿತ್ರ ಕಲಾವೃಂದ ನೆತ್ರಕೆರೆ, ನೇತ್ರಾವತಿ ಮಾತೃ ಮಂಡಳಿ ನೆತ್ರಕೆರೆ ಸಂಘಕ್ಕೆ ಲಭಿಸಿದ 2020ನೇ ಸಾಲಿನ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಮಾಜಕ್ಕೆ ಸಮರ್ಪಣೆ ಸಮಾರಂಭದಲ್ಲಿ ಮಾತನಾಡಿದರು.
ಸಮಾರಂಭವನ್ನು ಪೊಳಲಿ ಶ್ರೀ ರಾಮಕೃಷ್ಣ ತಪೋವನದ ಶ್ರೀ ವಿವೇಕ ಚೈತನ್ಯಾನಂದ ಸ್ವಾಮೀಜಿ ಉದ್ಘಾಟಿಸಿದರು.
ಪ್ರಶಸ್ತಿಯಿಂದ ಜವಾಬ್ದಾರಿ ಹೆಚ್ಚುತ್ತದೆ. ಇನ್ನಷ್ಟು ಸಾಮಾಜಿಕ ಚಟುವಟಿಕೆಗಳ ಮೂಲಕ ಮುಂದಿನ ದಿನಗಳಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಪುರಸ್ಕಾರ ಲಭಿಸುವಂತಾಗಲಿ ಎಂದು ಹಾರೈಸಿದರು.
ದೇವದಾಸ್ ಮಾಸ್ತರ್ ಕೊಡ್ಮಾಣ್, ಸದಾಶಿವ ಡಿ. ತುಂಬೆ, ಭಾಸ್ಕರ್ ರೈ, ದಿನೇಶ್ ಅಮೀನ್, ತೇವು ತಾರನಾಥ ಕೊಟ್ಟಾರಿ, ಪ್ರಸಾದ್ ಕುಮಾರ್ ಬಿ.ಸಿ.ರೋಡು, ಮಂಜು ವಿಟ್ಲ, ಮುಖ್ಯಶಿಕ್ಷಕಿ ಗುಣರತ್ನ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಆರೆಸ್ಸೆಸ್ ಪುತ್ತೂರು ಜಿಲ್ಲಾ ಸಂಘ ಚಾಲಕ ಕೊಡ್ಮಾಣ್ ಕಾಂತಪ್ಪ ಶೆಟ್ಟಿ, ಉಭಯ ಸಂಘಗಳ ಅಧ್ಯಕ್ಷರುಗಳಾದ ಸುರೇಶ್ ಭಂಡಾರಿ ಅರ್ಬಿ, ವಸಂತಿ ರಾಮಚಂದ್ರ, ತಾಪಂ ಸದಸ್ಯ ಗಣೇಶ್ ಸುವರ್ಣ, ಭೂ ಅಭಿವೃದ್ಧಿ ಬ್ಯಾಂಕ್ ನಿರ್ದೇಶಕ ಅರುಣ್ ರೋಶನ್ ಡಿಸೋಜ, ಪ್ರಸಾದ್ ಕುಮಾರ್, ತೇವು ತಾರನಾಥ ಕೊಟ್ಟಾರಿ, ಐತಪ್ಪ ಆಳ್ವ, ಉಮೇಶ್ ಸಾಲ್ಯಾನ್, ರಾಧಾಕೃಷ್ಣ ತಂತ್ರಿ, ಜ್ಯೋತೀಂದ್ರ ಶೆಟ್ಟಿ ಮುಂಡಾಜೆಗುತ್ತು, ನವೀನ್ ಚಂದ್ರ ಶೆಟ್ಟಿ, ರಮಾನಂದ ಶೆಟ್ಟಿ ಬೆಂಜನಪದವು, ಗೋಪಾಲ್ ಅಂಚನ್ ಉಪಸ್ಥಿತರಿದ್ದರು. ನವೋದಯ ಮಿತ್ರ ಕಲಾ ವೃಂದ ಸಂಚಾಲಕರು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು ದಾಮೋದರ ನೆತ್ರಕೆರೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.
ಶಿಕ್ಷಕಿ ಮೋಹಿನಿ ನಿರೂಪಿಸಿದರು. ಲೋಕೇಶ್ ವಂದಿಸಿದರು.
Kshetra Samachara
08/11/2020 02:58 pm