ಮಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಭಕ್ತರ ಅನುಕೂಲತೆಗಾಗಿ ಕ್ಷೇತ್ರದ ಪ್ರವಚನ ಮಂಟಪ ಹಾಗೂ ಸಹ್ಯಾದ್ರಿ ವಸತಿಗೃಹದಲ್ಲಿ ಸೇವಾ ರಶೀದಿ ಪಡೆಯುವ ಯಂತ್ರವನ್ನು ಉದ್ಘಾಟಿಸಲಾಯಿತು.
ಈ ವೇಳೆ ಮಾತನಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್, ಭಕ್ತರಿಗೆ ತ್ವರಿತವಾಗಿ ಸೇವಾ ರಶೀದಿ ಪಡೆಯಲು ಸಹಕಾರಿಯಾಗಲಿದೆ. ಭಕ್ತರು ನೇರವಾಗಿ ತಮ್ಮ ಅಪೇಕ್ಷೆಯ ಸೇವಾ ರಶೀದಿ ಪಡೆದು ಸರತಿ ಸಾಲಿನಲ್ಲಿ ಬಂದು ದೇವರ ದರ್ಶನ ಪಡೆಯಬಹುದು. ಇದರಿಂದ ಭಕ್ತರಿಗೆ ಸಮಯ ಉಳಿತಾಯವಾಗಲಿದೆ. ತಂತ್ರಜ್ಞಾನ ಅಳವಡಿಕೆಯಲ್ಲಿ ಕ್ಷೇತ್ರದ ಇನ್ನೊಂದು ಹೆಜ್ಜೆ ಇದಾಗಿದೆ ಎಂದರು. ಮಾತೃಶ್ರೀ ಹೇಮಾವತಿ ವಿ.ಹೆಗ್ಗಡೆ, ಸುಪ್ರಿಯಾ ಹರ್ಷೇಂದ್ರ ಕುಮಾರ್, ಪೂರನ್ ವರ್ಮ ,ಲಕ್ಷ್ಮಿ ನಾರಾಯಣ್ ಪಾರ್ಶ್ವನಾಥ್,ಮಲ್ಲಿನಾಥ್, ಚಂದ್ರಕಾಂತ, ನವೀನ್ ಮೊದಲಾದವರು ಉಪಸ್ಥಿತರಿದ್ದರು.
Kshetra Samachara
29/10/2020 08:44 pm