ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶ್ರೀ ಶಾರದಾಂಬೆಯ ಮೆರುಗಿನಲ್ಲಿ ಕ್ರಿಶ್ಚಿಯನ್ ಯುವತಿ ಮಿಂಚಿದಾಗ...

ಮುಲ್ಕಿ: ಕೊರೊನಾ ಹಾವಳಿ ನಡುವೆಯೂ ನವರಾತ್ರಿ ಉತ್ಸವ ಸರಳವಾಗಿ ನಡೆದಿದೆ.

ಈ ಮಧ್ಯೆ ಆನ್‌ಲೈನ್‌ ನಲ್ಲೂ ವಿವಿಧ ಸ್ಪರ್ಧೆಗಳು ನಡೆದಿದ್ದು, ಹಲವಾರು ಮಂದಿ ಶ್ರೀ ಶಾರದೆಯ ಫೋಟೊ ಶೂಟ್ ಮಾಡಿಸಿಕೊಂಡಿದ್ದು, ವೈರಲ್ ಆಗಿತ್ತು.

ಮಂಗಳೂರಿನ ಕ್ರಿಶ್ಚಿಯನ್ ಯುವತಿಯೋರ್ವರು ಶಾರದೆಯ ಫೋಟೊ ಶೂಟ್ ಮಾಡಿಕೊಂಡಿದ್ದು, ಅದಕ್ಕಾಗಿ ಅವರು 21 ದಿವಸಗಳ ವ್ರತ ಅಚರಿಸಿದ್ದಾರೆ.

ಕೆಲವು ಕಡೆ ಫ್ಯಾಶನ್‌ಗಾಗಿ ಶ್ರೀ ಶಾರದೆಯ ಫೋಟೊ ಶೂಟ್ ಮಾಡುತ್ತಿದ್ದಾರೆ ಎನ್ನುವ ಆಕ್ರೋಶದ ನುಡಿ ಕೇಳಿ ಬರುತ್ತಿರುವ ನಡುವೆ ಸಂಸ್ಕೃತಿ ಗೆ ಧಕ್ಕೆ ಬಾರದಂತೆ ಶ್ರೀ ಶಾರದೆಯ ಅಲಂಕಾರ ಮಾಡಿಸಿಕೊಂಡಿದ್ದು ವಿಶೇಷ.

ನಗರದ ಅನೀಶಾ ಹೆಸರಿನ ರೂಪದರ್ಶಿ ಈ ಫೋಟೊ ಶೂಟ್ ಮಾಡಿಸಿಕೊಂಡಿದ್ದು, ಸರ್ಪ್ರೈಸ್ ಸ್ಟುಡಿಯೋದ ದೀಪಕ್ ಗಂಗೂಲಿ ಸಂಯೋಜನೆಯಲ್ಲಿ ಛಾಯಾಗ್ರಾಹಕ ವರ್ಷಿಲ್ ಅಂಚನ್ ಕೈಚಳಕ ಹಾಗೂ ಮರ್ಸಿ ಲೇಡಿಸ್ ಸೆಲೂನ್‌ನ ಮರ್ಸಿ ವೀಣಾ ಡಿಸೋಜ ನೇತೃತ್ವದಲ್ಲಿ ಈ ಫೋಟೊ ಶೂಟ್ ನಡೆದಿದೆ.

Edited By : Nirmala Aralikatti
Kshetra Samachara

Kshetra Samachara

26/10/2020 08:10 pm

Cinque Terre

6.33 K

Cinque Terre

0

ಸಂಬಂಧಿತ ಸುದ್ದಿ