ಮುಲ್ಕಿ: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ ಪ್ರಯುಕ್ತ ಭಾನುವಾರ ಭಾರಿ ಜನ ಸಂದಣಿ ಕಂಡು ಬಂತು.
ಪ್ರತಿವರ್ಷ ನವರಾತ್ರಿ ಪ್ರಯುಕ್ತ ದೇವಳಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚಿದ್ದು, ಅದಕ್ಕಾಗಿ ಸರತಿ ಸಾಲಿನ ವ್ಯವಸ್ಥೆ ಮಾಡಲಾಗಿದೆ.
ಈ ಬಾರಿ ಬಿಸಿಲು, ಮಳೆಯಿಂದ ರಕ್ಷಣೆಗೆ ತಾತ್ಕಾಲಿಕ ಮೇಲ್ಛಾವಣಿ ನಿರ್ಮಿಸಲಾಗಿದೆ. ವರ್ಷಂಪ್ರತಿ ಲಲಿತಾ ಪಂಚಮಿ ದಿನ ಭಕ್ತರಿಗೆ ದೇವರ ಶೇಷ ವಸ್ತ್ರ ವಿತರಿಸಲಾಗುತ್ತಿದ್ದು, ಈ ಬಾರಿ ಕೋವಿಡ್ ಕಾರಣದಿಂದ ರದ್ದುಪಡಿಸಲಾಗಿದೆ, ಪ್ರತಿ ನವರಾತ್ರಿಯ ವಿಜಯದಶಮಿ ದಿನ ಮಕ್ಕಳಿಗೆ ಅಕ್ಷರಾಭ್ಯಾಸ ಇದ್ದು, ಈ ಬಾರಿ ಅದನ್ನು ಕೈಬಿಡಲಾಗಿದೆ.
ನವರಾತ್ರಿ ದಿನಗಳಲ್ಲಿ ವಿಶೇಷ ಅಲಂಕಾರಕ್ಕಾಗಿ ಮಧ್ಯಾಹ್ನ 3 ರಿಂದ 5ರ ವರೆಗೆ ದೇವರ ದರ್ಶನ ಇರುವುದಿಲ್ಲ ಎಂದು ದೇವಳದ ಪ್ರಕಟಣೆ ತಿಳಿಸಿದೆ.
Kshetra Samachara
18/10/2020 06:46 pm