ಬಂಟ್ವಾಳ: ಬಂಟ್ವಾಳ ತಾಲೂಕು ಕೊಯಿಲ, ಅಣ್ಣಳಿಕೆ ಯಕ್ಷಾಭಿಮಾನಿಗಳು ವತಿಯಿಂದ ರೋಟರಿ ಕ್ಲಬ್ ಲೊರೆಟ್ಟೊ ಹಿಲ್ಸ್ ಬಂಟ್ವಾಳ ಸಹಕಾರದಲ್ಲಿ 12ನೇ ವರ್ಷದ ತಾಳಮದ್ದಳೆ ಕೂಟ ಹಾಗೂ ಸನ್ಮಾನ ಕಾರ್ಯಕ್ರಮ ಅಣ್ಣಳಿಕೆ ಶ್ರೀ ವಿಘ್ನೇಶ್ವರ ಸಭಾಭವನದಲ್ಲಿ ಜರಗಿತು.
ಈ ಸಂದರ್ಭ ಹಿರಿಯ ಯಕ್ಷಗಾನ ಅರ್ಥಧಾರಿ, ಪ್ರಗತಿಪರ ಕೃಷಿಕ ನೋಣಯ್ಯ ಶೆಟ್ಟಿಗಾರ್ ಹಾಗೂ ಪತ್ನಿ ಸುಲೋಚನಾ ಅವರನ್ನು ಸನ್ಮಾನಿಸಲಾಯಿತು.
ಕೊಲ ಮಾವಂತೂರು ಶ್ರೀ ಮಹಾಗಣಪತಿ ದೇವಸ್ಥಾನದ ಆಡಳಿತ ಮೊಕ್ತೇಸರ ಪದ್ಮರಾಜ್ ಬಲ್ಲಾಳ್, ಹಿರಿಯ ಯಕ್ಷಗಾನ ಕಲಾವಿದ, ಅರ್ಥಧಾರಿ ಶಂಭು ಶರ್ಮ ವಿಟ್ಲ, ರೋಟರಿಕ್ಲಬ್ ಲೊರೆಟ್ಟೊ ಹಿಲ್ಸ್ ಬಂಟ್ವಾಳ ಅಧ್ಯಕ್ಷ ಆಂಟನಿ ಸಿಕ್ವೆರಾ, ಪ್ರ. ಕಾರ್ಯದರ್ಶಿ ಪ್ರೀತಂ ರೊಡ್ರಿಗಸ್, ನಿಕಟಪೂರ್ವ ಕಾರ್ಯದರ್ಶಿ ರಾಮಚಂದ್ರ ಶೆಟ್ಟಿಗಾರ್, ಯಕ್ಷಗಾನ ಸಂಘಟಕ ಹರಿಪ್ರಸಾದ್ ರಾವ್ ಸಿದ್ದೈಕೋಡಿ, ನ್ಯಾಯವಾದಿ ಸುರೇಶ್ ಶೆಟ್ಟಿ ಸಿದ್ದಕಟ್ಟೆ, ಸಮಿತಿ ಸದಸ್ಯರಾದ ಸುರೇಶ್ ಅಣ್ಣಳಿಕೆ, ಚಂದ್ರಹಾಸ ಅಣ್ಣಳಿಕೆ, ರಾಜಕುಮಾರ್ ಶೆಟ್ಟಿಗಾರ್, ಅಂಕಿತಾ, ಆಕಾಶ್, ಸುಮಿತ್ರಾ ಆರ್.ಶೆಟ್ಟಿಗಾರ್ ಮತ್ತಿತರರು ಉಪಸ್ಥಿತರಿದ್ದರು. ಬಳಿಕ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಕಚ ದೇವಯಾನಿ ತಾಳಮದ್ದಳೆ ನಡೆಯಿತು.
Kshetra Samachara
14/10/2020 06:14 pm