ವಿಟ್ಲ: ಖ್ಯಾತ ಕರಾಟೆ ಶಿಕ್ಷಕರೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲ ಸಮೀಪದ ನೀರ್ಕಜೆ ಖಂಡಿಗ ಎಂಬಲ್ಲಿ ನಡೆದಿದೆ.
ಮೃತರನ್ನು ವಿಟ್ಲ ಸಮೀಪದ ನೀರ್ಕಜೆ ನಿವಾಸಿ ಧರ್ಣಪ್ಪ ನಾಯ್ಕ್(38) ಎನ್ನಲಾಗಿದೆ.
ಧರ್ಣಪ್ಪ ನಾಯ್ಕ್ ರವರು ಮಂಗಳೂರಿನಲ್ಲಿ ಕರಾಟೆ ಶಿಕ್ಷಕರಾಗಿದ್ದು, ಕಳೆದ ಎ.29 ರಂದು ಶ್ರೀಲಂಕಾದ ಕ್ಯಾಂಡಿಯಲ್ಲಿ ನಡೆದ 10ನೇ ಅಂತರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ 6 ಚಿನ್ನ, 5 ಬೆಳ್ಳಿ, 1 ಕಂಚಿನ ಪಡೆಯಲು ಕಾರಣಕರ್ತರಾಗಿ, ದೇಶಕ್ಕೆ ಕೀರ್ತಿ ತಂದು ಕೊಟ್ಟ ಕರಾಟೆ ತರಬೇತುದಾರರಾಗಿದ್ದಾರೆ.
ಮೃತರು ಪತ್ನಿ, ಮಗು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
Kshetra Samachara
26/04/2022 10:12 pm