ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೆಡಿಕಲ್ ವಿದ್ಯಾರ್ಥಿನಿಯ ಮಾನಭಂಗ, ದರೋಡೆ ಪ್ರಕರಣ : ಅಪರಾಧಿಗೆ 7 ವರ್ಷ ಕಠಿಣ ಶಿಕ್ಷೆ

ಮಂಗಳೂರು : ದೇರಳಕಟ್ಟೆಯ ಹಾಸ್ಟೇಲ್ ಒಂದಕ್ಕೆ ನುಗ್ಗಿ ಮೆಡಿಕಲ್ ವಿದ್ಯಾರ್ಥಿನಿಯ ಮಾನಭಂಗ, ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಅಪರಾಧಿಗೆ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಲಯವು ಏಳು ವರ್ಷಗಳ ಕಠಿಣ ಸಜೆ ಮತ್ತು ದಂಡ ವಿಧಿಸಿದೆ.

ಅಪರಾಧಿ ನಾಗೇಶ್ (30) ಗೆ ಏಳು ವರ್ಷಗಳ ಕಠಿಣ ಸಜೆ ಮತ್ತು ದಂಡ ವಿಧಿಸಿದ್ದಾರೆ.

2019 ರಲ್ಲಿ ಉಳ್ಳಾಲ ಠಾಣಾ ವ್ಯಾಪ್ತಿಯ ದೇರಳಕಟ್ಠೆಯ ಹಾಸ್ಟೇಲ್ ಹಿಂಭಾಗದ ಪೈಪ್ ಮೂಲಕ ಒಳ ನುಗ್ಗಿದ ಅಪರಾಧಿ ನಾಗೇಶ್ ಕೇರಳ ಮೂಲದ 22 ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿಗೆ ಕೊಲೆ ಬೆದರಿಕೆಯೊಡ್ಡಿ, ಐದು ಲಕ್ಷ ನಗದು ನೀಡುವಂತೆ ಬೆದರಿಸಿದ್ದು ವಿದ್ಯಾರ್ಥಿನಿಯ ಪರ್ಸನಿಂದ 3 ಸಾವಿರ ನಗದು ಎಟಿಎಂ ಕಾರ್ಡ್ ಪಿನ್ ನಂಬರ್ ಪಡೆದು ಮತ್ತೊಂದು ರೂಂ ವಿದ್ಯಾರ್ಥಿನಿಯ ಮೊಬೈಲ್ ಎಗರಿಸಿ ಪರಾರಿಯಾಗಿದ್ದನು.

Edited By : Nirmala Aralikatti
Kshetra Samachara

Kshetra Samachara

28/09/2020 03:41 pm

Cinque Terre

12.63 K

Cinque Terre

0

ಸಂಬಂಧಿತ ಸುದ್ದಿ