ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಡಿಂಬಾಳದಲ್ಲಿ ಅಕ್ರಮ ಜಾನುವಾರು ಸಾಗಾಟ: ಬಿಜೆಪಿಯ ಮಾಜಿ ಪಂಚಾಯತ್ ಸದಸ್ಯ ಸೇರಿ ನಾಲ್ವರು ಪೋಲೀಸ್ ವಶಕ್ಕೆ

ಕಡಬ: ಕೋಡಿಂಬಾಳ ಗ್ರಾಮದ ಮಜ್ಜಾರು ಕ್ರಾಸ್ ಸಮೀಪ ಅಕ್ರಮವಾಗಿ ಕಸಾಯಿಖಾನೆಗೆ ಎರಡು ಜಾನುವಾರುಗಳನ್ನು ಕೊಂಡೋಯ್ಯುತ್ತಿದ್ದ ವೇಳೆ ಖಚಿತ ಮಾಹಿತಿ ಪಡೆದ ಕಡಬ ಪೋಲಿಸರು ಎರಡು ಹೋರಿ ಹಾಗೂ ಬಿಜೆಪಿ ಮಾಜಿ ಪಂಚಾಯತ್ ಸೇರಿ ನಾಲ್ವರನ್ನು ವಶಕ್ಕೆ ತೆಗೆದುಕೊಂಡ ಘಟನೆ ಕಡಬದ ಕೋಡಿಂಬಾಳದಲ್ಲಿ ನಡೆದಿದೆ.

ಇಲ್ಲಿನ ಪುಳಿಕುಕ್ಕು ಎಂಬಲ್ಲಿಂದ ಮಡ್ಯಡ್ಕ ಎಂಬಲ್ಲಿಗೆ ಜಾನುವಾರನ್ನು ಕೊಂಡೊಯ್ಯಲಾಗುತ್ತಿದ್ದು ಮಡ್ಯಡ್ಕದ ಮನೆಯೊಂದರಲ್ಲಿ ಕಸಾಯಿಖಾನೆ ನಡೆಸುತ್ತಿರುವ ಬಗ್ಗೆಯೂ ಆರೋಪಗಳು ಕೇಳಿ ಬಂದಿದೆ. ಈ ಜಾನುವಾರು ಸಾಗಾಟದಲ್ಲಿ ಕಡಬದ ಬಿಜೆಪಿಯ ಮಾಜಿ ಸದಸ್ಯರೋರ್ವರು ಶಾಮಿಲಾಗಿದ್ದು, ಎರಡು ಹೋರಿ,ಆಲ್ಟೋ ಕಾರು ಸೇರಿದಂತೆ ನಾಲ್ವರನ್ನು ಕಡಬ ಪೋಲೀಸರು ವಶಕ್ಕೆ ಪಡೆದಿದ್ದಾರೆ.

Edited By :
Kshetra Samachara

Kshetra Samachara

07/10/2020 06:53 pm

Cinque Terre

16.78 K

Cinque Terre

0

ಸಂಬಂಧಿತ ಸುದ್ದಿ