ಮುಲ್ಕಿ: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಬಳ್ಕುಂಜೆ ಪಡ್ಪು ಗುಡ್ಡೆಯಲ್ಲಿ ಕೋಳಿ ಅಂಕಕ್ಕೆ ಮುಲ್ಕಿ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಬಳ್ಕುಂಜೆ ಮೇಗಿನ ಮನೆ ನಿವಾಸಿ ನಿತ್ಯಾನಂದ ಶೆಟ್ಟಿ ಹಾಗೂ ಮಾಗಂದಡಿ ನಿವಾಸಿ ವಿಜಯಕುಮಾರ್ ಎಂದು ಗುರುತಿಸಲಾಗಿದ್ದು, ಉಳಿದ ಹನ್ನೊಂದು ಮಂದಿ ಪರಾರಿಯಾಗಿದ್ದಾರೆ. ಬಳ್ಕುಂಜೆ ಗುಡ್ಡೆ ಪಡ್ಪು ಬಳಿ ಕೋಳಿ ಅಂಕ ರಾಜಾರೋಷವಾಗಿ ನಡೆಯುತ್ತಿತ್ತು ಎನ್ನಲಾಗಿದ್ದು ಪೊಲೀಸರ ದಾಳಿ ಸೂಚನೆ ಲಭಿಸುತ್ತಿದ್ದಂತೆ ಕೋಳಿ ಅಂಕ ಪ್ರಿಯರು ಚೆಲ್ಲಾಪಿಲ್ಲಿಯಾಗಿ ಓಡಿದ್ದು, ಕೆಲವರಿಗೆ ಗಾಯಗಳಾಗಿವೆ.
ಬಂಧಿತ ಆರೋಪಿಗಳಿಂದ 4 ಕೋಳಿ, 4 ದ್ವಿಚಕ್ರ ವಾಹನ ಹಾಗೂ ಜೂಜಾಟಕ್ಕೆ ಬಳಸಿದ್ದ 9060 ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಕಳೆದ ಕೆಲ ತಿಂಗಳಿನಿಂದ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಅತಿಕಾರಿಬೆಟ್ಟು ಮೈಲೊಟ್ಟು, ಬಳ್ಕುಂಜೆ, ಬಲೆಪು, ಹಳೆಯಂಗಡಿಯ ಕೊಳುವೈಲು, ಅರಂದು, ಪಕ್ಷಿಕೆರೆ ಪಂಜ, ಪ್ರದೇಶಗಳಲ್ಲಿ ಕೋಳಿ ಅಂಕ ಹಾಗೂ ಮಟ್ಕಾ ದಂಧೆ ಎಗ್ಗಿಲ್ಲದೆ ನಡೆಯುತ್ತಿದ್ದು, ಪೊಲೀಸರ ದಾಳಿ ದಂಧೆಕೋರರಿಗೆ ನಡುಕ ಹುಟ್ಟಿಸಿದೆ. ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
18/10/2020 07:36 am