ಬಂಟ್ವಾಳ: ಕೊರೊನಾ ಪರಿಹಾರದ ಹಣ ಬಂದಿದೆ, ಹಣ ಸಿಗಬೇಕಾದರೆ ಹಣ ಕಟ್ಟಬೇಕು ಎಂದು ಹೇಳಿ ಬಡ ಮಹಿಳೆಯ ಬಂಗಾರವನ್ನೇ ವಂಚಕನೊಬ್ಬ ಲಪಟಾಯಿಸಿದ ಘಟನೆ ಬಂಟ್ವಾಳ ಮಿನಿ ವಿಧಾನಸೌಧದಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.
ಅಮ್ಟಾಡಿ ತಲೆಂಬಿಲ ನಿವಾಸಿ ಜಯಂತಿ ಮೋಸಕ್ಕೊಳಗಾದವರು. ಬಿ.ಸಿ.ರೋಡಿನ ಮೆಸ್ಕಾಂ ಕಚೇರಿಗೆ ಅವರು ಬಿಲ್ ಕಟ್ಟಲು ಬಂದಿದ್ದ ವೇಳೆ ವ್ಯಕ್ತಿಯೊಬ್ಬ ಮಹಿಳೆಯಲ್ಲಿ ಪರಿಚಯಸ್ಥನಂತೆ ನಟಿಸಿ, ನಿಮಗೆ ಕೊರೊನಾ ಹಿನ್ನೆಲೆಯಲ್ಲಿ 1.5 ಲಕ್ಷ ರೂ. ಬಂದಿದೆ. ಅದನ್ನು ಪಡೆಯಲು ಹತ್ತು ಸಾವಿರ ರೂ. ಕಟ್ಟಬೇಕು. ಆಧಾರ್ ಕಾರ್ಡ್ ತಾರದೇ ಇದ್ದರೆ, ಮಿನಿ ವಿಧಾನಸೌಧಕ್ಕೆ ಬನ್ನಿ, ಅರ್ಜಿ ನೀಡಬೇಕು ಎಂದು ಕರೆದುಕೊಂಡು ಬಂದಿದ್ದಾನೆ. ಬಳಿಕ 10 ಸಾವಿರ ರೂ. ಕೇಳಿದಾಗ ಮಹಿಳೆ ನನ್ನ ಬಳಿ ಹಣ ಇಲ್ಲ, ಮಗನ ಬಳಿ ಕೇಳುತ್ತೇನೆ ಎಂದು ಹೇಳುತ್ತಿದ್ದರೂ ನಿಮ್ಮ ಕಿವಿಯ ಬಂಗಾರ ಕೊಡಿ, ನಾನು ಕ್ಯಾಶ್ ಮಾಡಿಸುತ್ತೇನೆ ಎಂದು ಪುಸಲಾಯಿಸಿ, ಅವರ ಬಂಗಾರ ಪಡೆದು ಪರಾರಿಯಾಗಿದ್ದಾನೆ.
ಮಹಿಳೆ ಕಕ್ಕಾಬಿಕ್ಕಿಯಾಗಿ ಮಗನಿಗೆ ವಿಷಯ ತಿಳಿಸಿದ್ದು, ಬಳಿಕ ಬಂಟ್ವಾಳ ನಗರ ಠಾಣೆಗೆ ದೂರು ನೀಡಲಾಗಿದೆ. ಸ್ಥಳಕ್ಕೆ ಬಂಟ್ವಾಳ ನಗರ ಪೊಲೀಸರು ಆಗಮಿಸಿದ್ದು, ತನಿಖೆ ನಡೆಸುತ್ತಿದ್ದಾರೆ.
Kshetra Samachara
09/11/2020 04:04 pm