ಬೆಳ್ತಂಗಡಿ : ಅಗಸ್ಟ್ 29 ರಂದು ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ನಿನ್ನಿಕಲ್ಲು ಎಂಬಲ್ಲಿ ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ಮಲೆಬೆಟ್ಟು ನಿವಾಸಿ ಇಕ್ಬಾಲ್ ಸಾಧಿಕ್(27) ಎಂಬಾತ ಆಡು ಮೇಯಿಸಲು ಹೋಗಿದ್ದ ಪರಿಶಿಷ್ಟ ಜಾತಿಯ ಯುವತಿಯನ್ನು ಅಡ್ಡಗಟ್ಟಿ ಅತ್ಯಾಚಾರ ಮಾಡಲು ಯತ್ನಿಸಿದಾಗ ಸಾರ್ವಜನಿಕರು ಹಿಡಿದು ಬೆಳ್ತಂಗಡಿ ಪೊಲೀಸರಿಗೆ ಒಪ್ಪಿಸಿದ್ದರು.
ಬಳಿಕ ಈತನ ಮೇಲೆ ಅಟ್ರಾಸಿಟಿ ಅಡಿಯಲ್ಲಿ ಅತ್ಯಾಚಾರ ಯತ್ನ ಕೇಸು ದಾಖಲಾಗಿ ಜೈಲು ಪಾಲಾಗಿದ್ದ ಈತ 7-8-2020 ರಂದು ಜೈಲಿನಿಂದ ಜಾಮೀನು ಪಡೆದು ಹೊರಬಂದಿದ್ದ ಬಳಿಕ ಈ ಪ್ರಕರಣದಿಂದ ಮಾನಸಿಕ ಖಿನ್ನತೆಗೊಳಗಾಗಿದ್ದ.
ನಿನ್ನೆ ಮುಂಡೂರು ಬಳಿ ರಫೀಕ್ ಎಂಬಾತನಿಗೂ ಇಕ್ಬಾಲ್ ಸಾಧಿಕ್ ಮತ್ತಿತ್ತರರಿಗೆ ಸಣ್ಣಪುಟ್ಟ ಗಲಾಟೆ ನಡೆದಿತ್ತು ಇದರಿಂದ ರಫೀಕ್ ತನ್ನ ಮೇಲೆ ದೂರು ನೀಡಬಹುದು ಎಂಬ ಕಾರಣಕ್ಕೆ ಭಯಗೊಂಡು ಇಂದು ತಾರೀಕು 7 ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ತನ್ನ ಮಲೆಬೆಟ್ಟು 5 ಸೆಂಟ್ಸ್ ಮನೆಯಲ್ಲಿ ಕೋಣೆಯಲ್ಲಿ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.
Kshetra Samachara
07/10/2020 07:48 pm