ಮುಲ್ಕಿ:ಭಾರತ ಸರಕಾರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ,ನೆಹರು ಯುವ ಕೇಂದ್ರ ಮಂಗಳೂರು,
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ,ಮಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪಡುಪಣಂಬೂರು ಗ್ರಾಮ ಪಂಚಾಯತ್ ಪಡುಪಣಂಬೂರು ಮಾರ್ಗದರ್ಶನದಲ್ಲಿ ಕೆಮ್ರಾಲ್ ಅತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದೊಂದಿಗೆ ಫೇಮಸ್ ಯೂತ್ ಕ್ಲಬ್ (ರಿ) 10ನೇ ತೋಕೂರು ಮತ್ತು ಫೇಮಸ್ ಯೂತ್ ಕ್ಲಬ್ ಮಹಿಳಾ ಮಂಡಲ ಆಶ್ರಯದಲ್ಲಿ ಉಚಿತ ಕೋವಿಡ್ ಲಸಿಕಾ ಶಿಬಿರ ಫೇಮಸ್ ಯೂತ್ ಕ್ಲಬ್ ನ ಕಾರ್ಯಾಲಯದಲ್ಲಿ ನಡೆಯಿತು
ಒಟ್ಟು 35 ಜನರು ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.
ಗ್ರಾಮ ಪಂಚಾಯತ್ ಸದಸ್ಯರಾದ ಸೀತಾರಾಮ ಫೇಮಸ್ ಯೂತ್ ಕ್ಲಬ್ ನ ಕಾರ್ಯದರ್ಶಿ ಹಿಮಕರ ಕೋಟ್ಯಾನ್ ಫೇಮಸ್ ಯೂತ್ ಕ್ಲಬ್ ಮಹಿಳಾ ಮಂಡಲದ ಅಧ್ಯಕ್ಷರಾದ ಪ್ರೇಮಲತಾ ಯೋಗೀಶ್, ಉಪಾಧ್ಯಕ್ಷೆ ಅಮಿತಾ ದಿನಕರ್, ಕಾರ್ಯದರ್ಶಿ ಕುಸುಮ ಹರೀಶ್ ಕೋಟ್ಯಾನ್, ರೇಷ್ಮಾ ಮೋಹನ್ ದಾಸ್, ವಿಶಾಂತಿ, ಆಶಾ ಕಾರ್ಯಕರ್ತೆಯರಾದ ಯಶೋಧ ದೇವಾಡಿಗ ಮತ್ತು ಲತಾ ಉಪಸ್ಥಿತರಿದ್ದರು.
ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸಹಾಯಕಿ ಮಾರ್ಗರೇಟ್ ಸುದರ್ಶಿನಿಯವರು ಲಸಿಕೆಯ ಬಗ್ಗೆ ಮಾಹಿತಿಯನ್ನು ನೀಡಿದರು.
Kshetra Samachara
23/01/2022 07:02 am