ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಬಸ್ ನಿಲ್ದಾಣದ ಬಳಿ ಬೈಕ್ ಡಿಕ್ಕಿಯಾಗಿ ಪತ್ರಿಕಾ ಏಜೆಂಟ್ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಗಾಯಾಳುವನ್ನು ಜಯರಾಮ್ ಬಿ.ಎಸ್. (56) ಎಂದು ಗುರುತಿಸಲಾಗಿದೆ. ಗಾಯಾಳು ಜಯರಾಮ್ ಮುಲ್ಕಿ ಬಸ್ ನಿಲ್ದಾಣದ ಬಳಿ ಹಾಲಿನ ಅಂಗಡಿ ಹಾಗೂ ವಿವಿಧ ಪತ್ರಿಕೆಗಳ ಪತ್ರಿಕಾ ಏಜೆಂಟ್ ಆಗಿದ್ದು ಸೋಮವಾರ ಸಂಜೆ 8ಗಂಟೆ ರ ಸುಮಾರಿಗೆ ಹಾಲು ಸರಬರಾಜು ಪೂರೈಸಿ ತಮ್ಮ ಅಂಗಡಿಯತ್ತ ಹೋಗಲು ರಾಷ್ಟ್ರೀಯ ಹೆದ್ದಾರಿ ರಸ್ತೆ ದಾಟುತ್ತಿದ್ದಾಗ ಮಂಗಳೂರು ಕಡೆಗೆ ಹೋಗುತ್ತಿದ್ದ ಬೈಕ್ ಡಿಕ್ಕಿ ಆಗಿದೆ.
ಅಪಘಾತದ ರಭಸಕ್ಕೆ ಜಯರಾಮ ರವರ ಕೈ ಹಾಗೂ ತಲೆಗೆ ಗಾಯಗಳಾಗಿದ್ದು ಕೂಡಲೇ ಸ್ಥಳೀಯ ರಿಕ್ಷಾ ಚಾಲಕರು ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದಾರೆ. ಬೈಕ್ ಸವಾರ ಮುಲ್ಕಿ ಕೆಂಪುಗುಡ್ಡೆ ನಿವಾಸಿ ಅಲ್ಪಸ್ವಲ್ಪ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
Kshetra Samachara
11/04/2022 09:59 pm