ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಲಾರಿ- ಖಾಸಗಿ ಸಿಟಿ ಬಸ್ ಮಧ್ಯೆ ಅಪಘಾತ

ಮಂಗಳೂರು: ಲಾರಿ ಮತ್ತು ಖಾಸಗಿ ಸಿಟಿ ಬಸ್ ಮಧ್ಯೆ ಭಾನುವಾರ ಬೆಳ್ಳಂಬೆಳಗ್ಗೆ ಅಪಘಾತ ನಡೆದಿದೆ.

ಸುರತ್ಕಲ್‌- ಮಂಗಳಾದೇವಿ ಮಧ್ಯೆ ಸಂಚರಿಸುವ ಖಾಸಗಿ 15 ನಂಬರ್ ಬಸ್ ಹಾಗೂ ಲಾರಿ ಮಧ್ಯೆ ಅಪಘಾತ ಸಂಭವಿಸಿದೆ.

ನಗರದ ಕಂಕನಾಡಿಯಲ್ಲಿ ಈ ಅಪಘಾತ ನಡೆದಿದ್ದು, ಪ್ರಯಾಣಿಕರಿಗೆ ಗಾಯಗಳಾಗಿರುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ವಾರದ ಎಲ್ಲಾ ದಿನ ದಿನಗಳಲ್ಲೂ ಜನ ಜಂಗುಳಿಯಿಂದ ತುಂಬಿರುತ್ತಿದ್ದ 15 ನಂಬರ್ ನ ಬಸ್ ಇಂದು ಭಾನುವಾರವಾಗಿರುವ ಹಿನ್ನೆಲೆಯಲ್ಲಿ ಬಸ್ ನಲ್ಲಿ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು. ಈ ಹಿನ್ನೆಲೆಯಲ್ಲಿ ಸಂಭವನೀಯ ಪ್ರಾಣಹಾನಿಯಿಂದ ತಪ್ಪಿದಂತಾಗಿದೆ.

Edited By : Nirmala Aralikatti
Kshetra Samachara

Kshetra Samachara

17/01/2021 10:09 am

Cinque Terre

8.88 K

Cinque Terre

0

ಸಂಬಂಧಿತ ಸುದ್ದಿ