ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಪ್ಪಿನಂಗಡಿ: ಡಾಂಬರು ಸಾಗಾಟದ ಟ್ಯಾಂಕರ್ ಪಲ್ಟಿ; ಜಿಗಿದು ಪಾರಾದ ಚಾಲಕರು

ಉಪ್ಪಿನಂಗಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ, ಬಜತ್ತೂರು ಗ್ರಾಮದ ಬೆದ್ರೋಡಿ ಎಂಬಲ್ಲಿ ಡಾಂಬರು ಸಾಗಾಟದ ಟ್ಯಾಂಕರ್ ಪಲ್ಟಿಯಾಗಿ ಸುಮಾರು 100 ಅಡಿ ಆಳಕ್ಕೆ ನದಿಗೆ ಉರುಳಿ ಬಿದ್ದಿದೆ.

ಟ್ಯಾಂಕರ್ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಅರ್ಧದಷ್ಟು ಡಾಂಬರು ಸೋರಿಕೆಯಾಗಿ ನದಿನೀರಿನಲ್ಲಿ ಸೇರಿಕೊಂಡಿದೆ.

ಮಂಗಳೂರಿನಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಟ್ಯಾಂಕರ್ ಬೆದ್ರೋಡಿಯಲ್ಲಿ ಈ ಹಿಂದೆ ಇದ್ದ ತೂಗುಸೇತುವೆ ಬಳಿಯ ತಿರುವಿನಲ್ಲಿ ಚಾಲಕನ ನಿಯಂತ್ರಣಕ್ಕೆ ಸಿಗದೆ ನದಿ ಪಾತ್ರದತ್ತ ಸಂಚರಿಸಿ ನೂರು ಅಡಿ ದೂರದಲ್ಲಿನ ನೇತ್ರಾವತಿ ನದಿಯಲ್ಲಿ ಮಗುಚಿ ಬಿದ್ದಿದ್ದು, ನುಜ್ಜುಗುಜ್ಜಾಗಿದೆ.

ಟ್ಯಾಂಕರ್‌ ಚಾಲಕರಾದ ಸುಳ್ಯದ ಅಬ್ದುಲ್ ಖಾದರ್ ಹಾಗೂ ಮಲಂಗಾವ್ ನಿವಾಸಿ ಮಲ್ಲಿಕಾರ್ಜುನ್ ಎಂಬವರು ಟ್ಯಾಂಕರ್ ಪಲ್ಟಿ ಆಗುತ್ತಿದ್ದಂತೆಯೇ ಹೊರ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಬಗ್ಗೆ ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nagaraj Tulugeri
Kshetra Samachara

Kshetra Samachara

23/12/2020 06:28 pm

Cinque Terre

13.02 K

Cinque Terre

0

ಸಂಬಂಧಿತ ಸುದ್ದಿ