ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇನ್ಮುಂದೆ ಪುರುಷರು ಸ್ತ್ರೀಯರಿಗೆ, ಸ್ತ್ರೀಯರು ಪುರುಷರಿಗೆ ಮಸಾಜ್ ಮಾಡುವಂತಿಲ್ಲ

ನವದೆಹಲಿ: ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ದೆಹಲಿ ಸರ್ಕಾರ ಸ್ಪಾ,ಮಸಾಜ್ ಸೆಂಟರ್ ಗಳಿಗೆ ಕಠಿಣ ರೂಲ್ಸ್ ಗಳನ್ನು ಜಾರಿಗೊಳಿಸಿದೆ. ಹೌದು ಇನ್ಮುಂದೆ ಸ್ಪಾ, ಮಸಾಜ್ ಸೆಂಟರ್ ಗಳಲ್ಲಿ ಪುರುಷರು ಮಹಿಳೆಯರ ಬಳಿ, ಮಹಿಳೆಯರು ಪುರುಷರ ಬಳಿ ಮಸಾಜ್ ಮಾಡಿಸಿಕೊಳ್ಳುವಂತಿಲ್ಲ ಎಂದು ಆದೇಶ ಹೊರಡಿಸಿದೆ.

ಇದರಿಂದ ಸ್ಪಾ ಸೆಂಟರ್ ಗಳಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ಮುಂದಾಗಿದೆ. ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವುದು ಬೆಳಕಿಗೆ ಬಂದ ಬೆನ್ನಲ್ಲೆ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಹೊಸ ಮಾರ್ಗಸೂಚಿ ಹೊರಡಿಸಿದ್ದಾರೆ.

ಪೂರ್ವ ದೆಹಲಿಯಲ್ಲಿ ಪ್ರಸ್ತುತ 70ಕ್ಕೂ ಹೆಚ್ಚಿನ ಸ್ಪಾ ಕೇಂದ್ರಗಳಿದ್ದು, ಅದರಲ್ಲಿ 41 ಕೇಂದ್ರಗಳು ಮಾತ್ರ ಪರವಾನಿಗೆಯೊಂದಿಗೆ ನಡೆಯುತ್ತಿವೆ. ಇದರ ಜತೆಗೆ, ಸ್ಪಾ ಕೇಂದ್ರದಲ್ಲಿರುವ ಗ್ರಾಹಕರು ಮತ್ತು ಸಿಬ್ಬಂದಿ ಕರೊನಾ ನಿಮಯ ಪಾಲನೆ ಮಾಡಬೇಕು. ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

Edited By : Nirmala Aralikatti
PublicNext

PublicNext

22/09/2021 04:25 pm

Cinque Terre

21.18 K

Cinque Terre

1