ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

‌ಮೂವತ್ತು ವರ್ಷದ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಿದ ರೆಹಮಾನ್‌, #arrsairabreakup ಹ್ಯಾಶ್‌ ಟ್ಯಾಗ್‌ ಪೋಸ್ಟ್‌ ಗೆ ಎಲ್ಲೆಡೆ ವ್ಯಂಗ್ಯ

ಸಂಗೀತ ಮಾಂತ್ರಿಕ ಎ.ಆರ್‌ ರೆಹಮಾನ್‌ ಮೂರು ದಶಕಗಳ ದಾಂಪತ್ಯದ ನಂತರ ಪತ್ನಿ ಸಾಯಿರಾ ಬಾನು ಜೊತೆ ವಿಚ್ಛೇದನ ಘೋಷಣೆ ಮಾಡಿದ್ದಾರೆ.ಈ ಸುದ್ದಿ ಕೇಳಿ ಎಲ್ಲರೂ ದಿಗ್ಭ್ರಮೆ ಗೊಂಡಿದ್ದಾರೆ.ಘನತೆ ಮತ್ತು ಪರಸ್ಪರ ಗೌರವದಿಂದ ವಿಚ್ಛೇದನವನ್ನು ಪಡೆಯುತ್ತಿರುವುದಾಗಿ ಇಬ್ಬರೂ ಹೇಳಿಕೊಂಡಿದ್ದಾರೆ.ನವೆಂಬರ್ 19 ರಂದು ಪ್ರತ್ಯೇಕತೆಯ ಬಗ್ಗೆ ಹೇಳಿಕೊಂಡಿದ್ದು ವಿಲಕ್ಷಣವೆಂದರೆ ಡಿವೋರ್ಸ್‌ ವಿಚಾರ ಬಹಿರಂಗ ಪಡಿಸಲು ಹ್ಯಾಶ್‌ ಟ್ಯಾಗ್‌ ಬಳಸಿದ್ದಾರೆ.

#arrsairabreakup ಎಂಬ ಹ್ಯಾಶ್‌ ಟ್ಯಾಕ್‌ ಬಳಸಿದ್ದಕ್ಕೆ ಎಲ್ಲರೂ ರೆಹಮಾನ್‌ ಪ್ರಶ್ನಿಸಿದ್ದು,ಇಂತಹ ಸೂಕ್ಷ್ಮ ವಿಚಾರಕ್ಕೆ ಈ ರೀತಿ ಬೇಕಿತ್ತಾ ಎಂದಿದ್ದಾರೆ?ಸಾಯಿರಾ ವಕೀಲರು ಹೇಳಿಕೆ ನೀಡಿದ ಕೆಲವೇ ಗಂಟೆಗಳ ನಂತರ, ಎಆರ್ ರೆಹಮಾನ್ ಎಕ್ಸ್‌ ನಲ್ಲಿ ಭಾವನಾತ್ಮಕ ಬರಹದೊಂದಿಗೆ ವಿಚ್ಛೇದನ ಸುದ್ದಿ ತಿಳಿಸಿದ್ದಾರೆ. ಅವರ ಎಕ್ಸ್‌ ಪೋಸ್ಟ್‌ ಅನ್ನು ರೀ ಟ್ವೀಟ್‌ ಮಾಡಿದ ಕೆಲವೊಂದಿಷ್ಟು ಮಂದಿ ಸಪರೇಶನ್‌ ಗೂ ಹ್ಯಾಶ್‌ ಟ್ಯಾಗಾ? ಎಂದು ಸೋಜಿಗ ವ್ಯಕ್ತಪಡಿಸಿದ್ದಾರೆ.

Edited By : Suman K
PublicNext

PublicNext

20/11/2024 07:51 pm

Cinque Terre

45.47 K

Cinque Terre

2

ಸಂಬಂಧಿತ ಸುದ್ದಿ