ಅಬುಜಾ (ನೈಜೀರಿಯಾ) ಆಧುನಿಕ ಪ್ರಪಂಚದಲ್ಲಿ ಜನ ಡಿಫ್ರೆಂಟಾಗಿ ಬದುಕಬೇಕೆಂದು ಬಯಸುತ್ತಾರೆ. ಅದಕ್ಕಾಗಿ ಹಲವಾರು ಕಸರತ್ತುಗಳನ್ನ ಮಾಡ್ತಾರೆ. ಆದ್ರೆ ಇಲ್ಲೊಬ್ಬ ರಸಿಕ ಪತಿ ತನ್ನ ಆರು ಪತ್ನಿಯರನ್ನ ಏಕಕಾಲಕ್ಕೆ ಗರ್ಭಿಣಿಯರನ್ನಾಗಿ ಮಾಡಿದ್ದಾನೆ. ಸದ್ಯ ಇದೇ ವಿಷಯ ನೆಟ್ಟಿಗರ ಆಸಕ್ತಿ ಕೆರಳಿಸಿದೆ.
ಅಂದ್ ಹಾಗೆ ಈ ಮಹಾ ರಸಿಕ ಗಂಡನ ಹೆಸರು 'ಮೈಕ್'. ಈತ ನೈಜೀರಿಯಾದ ಅಬುಜಾ ಮೂಲದವನು. ಅಲ್ಲಿ ಪ್ಲೇಬಾಯ್ ಎಂದೇ ಹೆಸರಾಗಿದ್ದಾನೆ.
ಇತ್ತೀಚೆಗೆ ತನ್ನ ಸ್ನೇಹಿತನ ಮದುವೆಗೆ ಆರೂ ಜನ ಗರ್ಭವತಿ ಪತ್ನಿಯರೊಂದಿಗೆ ಮೈಕ್ ಹೋಗಿದ್ದ. ಅಲ್ಲಿ ನೆರೆದಿದ್ದ ಜನ ಮದುವೆ ಸಂಭ್ರಮದಲ್ಲಿ ಭಾಗಿಯಾಗದೇ ಮೈಕ್ ನ ತುಂಬು ಸಂಸಾರವನ್ನಿ ಕಣ್ತುಂಬಿಕೊಳ್ಳುತ್ತಿದ್ದರಂತೆ. ತನ್ನ ಎಲ್ಲ ಪತ್ನಿಯರ ನಡುವೆ ಹೊಂದಾಣಿಕೆ ಇದೆ. ಸಹಬಾಳ್ವೆ ಇದೆ. ಆ ಬಗ್ಗೆ ನನಗೆ ಹೆಮ್ಮೆಯೂ ಇದೆ ಎಂದು ಮೈಕ್ ಹೇಳುತ್ತಾನೆ.
ಈ ಹಿಂದೆ ಯುವತಿಯರನ್ನು ಕುದುರೆಯಂತೆ ಕಟ್ಟಿದ್ದ ಮೈಕ್, ಸಾರಥಿಯಂತೆ ಪೋಸ್ ಕೊಟ್ಟು ಫೋಟೋಶೂಟ್ ಮಾಡಿಸಿಕೊಂಡಿದ್ದ. ಮತ್ತು ಮಹಿಳೆಯರನ್ನು ಕೆಟ್ಟ ದೃಷ್ಟಿಯಿಂದ ಕಾಣುತ್ತಿದ್ದ. ಅದಕ್ಕಾಗಿ ಆತನ ಮೇಲೆ ಪೊಲೀಸರು ಕೇಸ್ ದಾಖಲಿಸಿದ್ದರು.
PublicNext
27/11/2020 08:57 am