ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಂದು ತುಳಸಿ ಹಬ್ಬ: ಹಿನ್ನಲೆ ಏನು?

ಕಾರ್ತಿಕ ಮಾಸ ದೇವರಿಗೆ ಇಷ್ಟವಾದ ಮಾಸ ಅಂತ ಹೇಳಲಾಗುತ್ತೆ. ಈ ಮಾಸದಲ್ಲಿ ದೀಪಾರಾಧನೆ ಹೆಚ್ಚಾಗಿ ನಡೆಯುತ್ತದೆ. ಶ್ರೀಮನ್ನಾರಾಯಣನನ್ನು ಬಹುವಿಧವಾಗಿ ಧ್ಯಾನಿಸುವ ಮಾಸ ಇದು. ಇದೇ ಮಾಸದಲ್ಲಿ ತುಳಸಿ ಹಬ್ಬ ಕೂಡ ಒಂದು ಮುಖ್ಯವಾದ ಸಂದರ್ಭ.

ಗೋಧೂಳಿ ಸಮಯದಲ್ಲಿ ತುಳಸಿ ಆರಾಧನೆ ಮಾಡೋದು ಈ ಹಬ್ಬದ ವಿಶೇಷ. ಮನೆಯ ಮುಂದಿನ ತುಳಸಿ ಕಟ್ಟೆಯಲ್ಲಿ ಶ್ರೀಕೃಷ್ಣನ ವಿಗ್ರಹವನ್ನು ಪ್ರತಿಷ್ಟಾಪಿಸಿ ಷೋಡೋಪಚಾರ ಪೂಜೆ ಮಾಡಲಾಗುತ್ತೆ‌.

ತುಳಸಿ ಹಬ್ಬದ ಹಿನ್ನೆಲೆ: ಕಾರ್ತಿಕ ಶುಕ್ಲ ಪಕ್ಷ ದ್ವಾದಶಿಯ ದಿನ ಶ್ರೀಮನ್ನಾರಾಯಣ ತುಳಸಿಯನ್ನು ವರಿಸಿದ್ದನೆಂದು ಪ್ರತೀತಿ. ತ್ರೇತಾಯುಗದಲ್ಲಿ ತುಳಸಿಯು ಮನುಷ್ಯಳಾಗಿ ವೃಂದಾ ಎಂಬ ನಾಮಧೇಯದಿಂದ ಹುಟ್ಟಿದ್ದಳು. ಈಕೆಯ ಪತಿ ಜಲಂಧರ ಮಹಾಶಿವಭಕ್ತನಾಗಿದ್ದ. ಒಮ್ಮೆ ಉಗ್ರ ತಪಸ್ಸು ಮಾಡಿದ ಫಲವಾಗಿ ಪ್ರತ್ಯಕ್ಷನಾದ ಶಿವನ ಬಳಿ ಆತ ತನಗೆ ಅಮರತ್ವ ಕೊಡುವಂತೆ ಬೇಡುತ್ತಾನೆ.‌ ಆದರೆ ಇದು ಪ್ರಕೃತಿ ನಿಯಮಕ್ಕೆ ವಿರುದ್ಧವಾದದ್ದು. ಇದಕ್ಕೆ ಪರ್ಯಾಯವಾಗಿ ನಿನ್ನ ಪತ್ನಿಯ ಪಾತಿವ್ರತ್ಯ ಎಲ್ಲಿಯವರೆಗೂ ಇರುತ್ತದೋ ಅಲ್ಲಿಯವರೆಗೂ ನಿನಗೆ ಸಾವಿಲ್ಲ ಎಂದು ಶಿವ ವರ ನೀಡುತ್ತಾನೆ.

ತನ್ನ ಪತ್ನಿ ವೃಂದಾ ಮಹಾ ಪತಿವ್ರತೆ. ಆದ್ದರಿಂದ ಜಲಂಧರ ಕೊಬ್ಬಿದ. ಮತ್ತು ತನಗೆ ಸಾವಿಲ್ಲವೆಂಬುದನ್ನು ಅರಿತ ಆತ ದೇವಾನುದೇವತೆಗಳಿಗೆ ತೊಂದರೆ ಕೊಡಲಾರಂಭಿಸಿದ. ಇದರಿಂದ ದೇವತೆಗಳು ನಾರಾಯಣನ ಮೊರೆ ಹೋಗುತ್ತಾರೆ‌. ಆಗ ಶ್ರೀಹರಿಯ ರೂಪದಲ್ಲಿ ಬಂದ ನಾರಾಯಣ ವೃಂದೆಯ ಪಾತಿವ್ರತ್ಯಕ್ಕೆ ಭಂಗ ತರುತ್ತಾ‌ನೆ‌. ಇದರಿಂದ ದುಷ್ಟ ಜಲಂಧರ ಸಾವನ್ನಪ್ಪುತ್ತಾನೆ.

ನಂತರ ವೃಂದೆ ತಾನೇ ಚಿತೆ ನಿರ್ಮಿಸಿಕೊಂಡು ಅಗ್ನಿಗೆ ಬಲಿಯಾಗುತ್ತಾಳೆ. ಅದೇ ಅಗ್ನಿಕುಂಡವನ್ನು ಪಾರ್ವತಿ ತನ್ನ ಮಂತ್ರಶಕ್ತಿಯಿಂದ ತುಳಸಿ, ನೆಲ್ಲಿ, ಮತ್ತು ಜಾಜಿ ಗಿಡ ಬೆಳೆಸಿ ನಂದನವನವನ್ನಾಗಿ ಮಾಡುತ್ತಾಳೆ. ಈ ಹಿನ್ನಲೆಯಲ್ಲಿ ತುಳಸಿ ಮದುವೆ ಅಥವಾ ತುಳಸಿ ಹಬ್ಬವನ್ನು ಆಚರಿಸುತ್ತಾರೆ.

Edited By : Nagaraj Tulugeri
PublicNext

PublicNext

26/11/2020 08:05 am

Cinque Terre

127.15 K

Cinque Terre

11