ಮುಂಬೈ- ಕೊರೊನಾ ನಿಯಂತ್ರಣ ಸಾಧಿಸಲು ಕ್ಷಣ-ಕ್ಷಣವೂ ಹವಣಿಸುತ್ತಿರುವ ಸರ್ಕಾರಕ್ಕೆ ಸಾಕುಬೇಕಾಗಿದೆ. ಈ ನಡುವೆ ಕಡ್ಡಾಯವಾಗಿ ಮಾಸ್ಕ್ ಹಾಕಬೇಕೆಂಬ ನಿಯಮ ಮಾಡಿ ತಿಂಗಳುಗಳೇ ಕಳೆದಿವೆ. ಆದರೂ ಸಾರ್ವಜನಿಕ ಪ್ರದೇಶಗಳಲ್ಲಿ ಜನ ಮಾಸ್ಕ್ ಹಾಕದೇ ಓಡಾಡ್ತಿದ್ದಾರೆ.
ದಂಡ ಹಾಕುವ ನಿಯಮ ಜಾರಿಯಾದರೂ ಜನ ಮಾಸ್ಕ್ ಹಾಕುತ್ತಿಲ್ಲ. ಏನೇನೋ ಸಬೂಬು ಹೇಳಿ ಜಾರಿಕೊಳ್ತಾರೆ. ದಂಡ ಕಟ್ಟಲು ಶಕ್ತರಾದವರು ಕಟ್ತಾರೆ. ಕಟ್ಟಲಾಗದವರು ಕೈಚೆಲ್ಲಿ ಮುಂದೆ ಹೋಗ್ತಾರೆ.
ಆದ್ರೆ ಇನ್ಮುಂದೆ ಅದೆಲ್ಲ ನಡೆಯೋಲ್ಲ. ಯಾಕಂದ್ರೆ ದಂಡ ಕಟ್ಟದಿರುವ ಸಾರ್ವಜನಿಕರಿಗೆ ಮಹಾರಾಷ್ಟ್ರ ಸರ್ಕಾರ ಹೊಸ ನಿಯಮ ಜಾರಿ ಮಾಡಿದೆ. ದಂಡ ಕಟ್ಟದಿರುವವರ ಕೈಗೆ ಮುಂಬೈ ಪೊಲೀಸರು ಪೊರಕೆ ಕೊಟ್ಟು ಕಸ ಗುಡಿಸುವಂತೆ ಹೇಳ್ತಿದ್ದಾರೆ.
ಇಂತದ್ದೊಂದು ನಿಯಮ ಅಲ್ಲಿ ಜಾರಿಯಾಗಿದೆ. ಆದ್ರೆ ಎಷ್ಟರ ಮಟ್ಟಿಗೆ ಯಶಸ್ಸು ಕಾಣುತ್ತೋ ಕಾದು ನೋಡಬೇಕಿದೆ.
PublicNext
30/10/2020 05:47 pm