ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಧುಗಿರಿ: ಪುಂಡರಿಗೆ ವಾರ್ನಿಂಗ್ ನೀಡಿದ ಪಿಎಸ್ಐ

ಮಧುಗಿರಿ: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಅನಗತ್ಯವಾಗಿ ಒಡಾಡುತ್ತಿದ್ದ ಪುಂಡರನ್ನು ಪಿಎಸ್ಐ ಕೆ.ಟಿ. ರಮೇಶ್ ಎಚ್ಚರಿಕೆ ನೀಡಿದರು.ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದ ಗೋಡೆಯ ಮೇಲೆ ಹೆಣ್ಣು ಮಕ್ಕಳ ಹೆಸರು ಬರೆಯುವುದು ಹಾಗೂ ಪ್ರೀತಿಸು ಅಂತ ಹಿಂದೆ ಬಿದ್ದು ಚುಡಾಯಿಸುತ್ತಿದ್ದರು.

ಈ ವಿಷಯ ತಿಳಿದು ಪಿಎಸ್ಐ ಕೆ.ಟಿ. ರಮೇಶ್ ಅವರು ದಿಢೀರ್ ಭೇಟಿ ನೀಡಿದಾಗ, ಕಾಲೇಜಿನ ಆವರಣದಲ್ಲಿ ಅನಗತ್ಯವಾಗಿ ಓಡಾಟ ನಡೆಸುತ್ತಿದ್ದ ಪುಂಡರನ್ನು ಅಟ್ಟಾಡಿಸಿದರು.ಪುಂಡರು ನಿಮ್ಮನ್ನು ಹೆಣ್ಣುಮಕ್ಕಳನ್ನು ಚುಡಾಯಿಸಿದರೆ, 112 ಕರೆ ಮಾಡುವಂತೆ ಪಿಎಸ್ ಐ ಕೆ.ಟಿ. ರಮೇಶ್ ತಿಳಿಸಿದರು.

ನಂತರ ಎಂ ಜಿ ಎಂ ಬಾಲಿಕಾ ಪ್ರೌಢಶಾಲೆ ಅಕ್ಕಪಕ್ಕದ ಆಟೋ ಸ್ಟ್ಯಾಂಡ್ ಗಳಲ್ಲಿ ಪಿಎಸ್ ಐ ತೆರಳಿ ಅಲ್ಲಿನ ಆಟೋ ಚಾಲಕರಿಗೂ ಎಚ್ಚರಿಕೆ ನೀಡಿದ್ದಲ್ಲದೆ ಕೆಲವು ಆಟೊ ಚಾಲಕರು ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿರುವ ಬಗ್ಗೆ ದೂರು ಬಂದಿದೆ ಅಂತಹವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದರು. ಪೊಲೀಸರ ಈ ನಡೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

Edited By : Nirmala Aralikatti
PublicNext

PublicNext

27/07/2022 07:11 pm

Cinque Terre

22.61 K

Cinque Terre

2

ಸಂಬಂಧಿತ ಸುದ್ದಿ