ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

PSI ನೇಮಕಾತಿ ಹಗರಣ; ಬಂಧಿತ ಗಣಪತಿ ಭಟ್ ನಮ್ಮ ಸಿಬ್ಬಂದಿಯಲ್ಲ ಎಂದ ಗೃಹ ಸಚಿವಾಲಯ

ಬೆಂಗಳೂರು: 545 ಪಿಎಸ್ಐ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ಉತ್ತರ ಕನ್ನಡ ಜಿಲ್ಲೆ ಶಿರಸಿ ಮೂಲದ ಗಣಪತಿ ಭಟ್ (62) ಎಂಬುವರನ್ನು ಬಂಧಿಸಿದ್ದಾರೆ. ಆರಂಭದಲ್ಲಿ ಗಣಪತಿ ಭಟ್ ಗೃಹ ಸಚಿವರ ಕಾರ್ಯಾಲಯದ ಸಿಬ್ಬಂದಿ ಎನ್ನಲಾಗಿತ್ತು. ಈ ಬಗ್ಗೆ ಸದ್ಯ ರಾಜ್ಯ ಗೃಹ ಸಚಿವಾಲಯವು ಸ್ಪಷ್ಟನೆ ನೀಡಿದೆ.

PSI ಅಕ್ರಮ ಪರೀಕ್ಷಾ ಹಗರಣದ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು, ಗಣಪತಿ ಭಟ್‌ ಎಂಬುರನ್ನು ಬಂಧಿಸಿದ್ದು, ಇಂದು ವಿಚಾರಣೆಗೆಂದು ವಶಕ್ಕೆ ಪಡೆದು, ಪ್ರಶ್ನಿಸುತ್ತಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಗೃಹ ಸಚಿವರ ಕಾರ್ಯಾಲಯವು, ''ಈ ಮೇಲೆ ಕಾಣಿಸಿದ ವ್ಯಕ್ತಿಯು ಗೃಹ ಸಚಿವರ ಕಾರ್ಯಾಲಯದ ಸಿಬ್ಬಂದಿಯಲ್ಲ" ಎಂದು ಗಣಪತಿ ಭಟ್ ಫೋಟೋ ಬಿಡುಗಡೆ ಮಾಡಿದೆ.

Edited By : Vijay Kumar
PublicNext

PublicNext

12/07/2022 05:08 pm

Cinque Terre

53.37 K

Cinque Terre

0