ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಅವ್ರು ನಿಷ್ಕಳಂಕವಾಗಿ ಬರುತ್ತಾರೆ': ರವಿ ಚನ್ನಣ್ಣನವರ ಬೆಂಬಲಕ್ಕೆ ನಿಂತ ಎನ್.ಶಶಿಕುಮಾರ್

ಮಂಗಳೂರು: ಐಪಿಎಸ್ ಅಧಿಕಾರಿ ರವಿ ಡಿ.ಚನ್ನಣ್ಣನವರ್ ವಿರುದ್ಧ ಲಂಚ ಪಡೆದ ಆರೋಪ ಕೇಳಿ ಬಂದಿದೆ. ಸದ್ಯ ಅವರ ಬೆಂಬಲಕ್ಕೆ ಮಂಗಳೂರು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಅವರು ಬಂದಿದ್ದಾರೆ.

ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಎನ್.ಶಶಿಕುಮಾರ್ ಅವರು, ರವಿ ಡಿ.ಚನ್ನಣ್ಣನವರ್ ನಿಷ್ಕಳಂಕವಾಗಿ ಹೊರ ಬರುತ್ತಾರೆ. ಅವರ ಮೇಲಿರುವ ಆರೋಪದ ಸತ್ಯಾಸತ್ಯತೆ ತಿಳಿಯುವ ಮುನ್ನ ಈ ರೀತಿ ತೀರ್ಮಾನಕ್ಕೆ ಬರುವುದು ತಪ್ಪು. ರವಿ ಡಿ.ಚನ್ನಣ್ಣನವರ್ ಅವರು ಕಷ್ಟದಲ್ಲಿ ಓದಿ ಮೇಲೆ ಬಂದವರು. ಅವರಿಗೆ ಅನೇಕ ಜನರು ಅಭಿಮಾನಿಗಳಿದ್ದಾರೆ. ಅವರು ಪ್ರಸಿದ್ಧ ಜನಪ್ರಿಯ ಅಧಿಕಾರಿಯಾಗಿದ್ದಾರೆ. ಅವರು ಲಕ್ಷಾಂತರ ವಿದ್ಯಾರ್ಥಿಗಳ ಮತ್ತು ಯುವಜನತೆಯ ಸ್ಫೂರ್ತಿಯಾಗಿರುವ ವ್ಯಕ್ತಿ ಎಂದು ತಿಳಿಸಿದ್ದಾರೆ.

Edited By : Vijay Kumar
PublicNext

PublicNext

16/01/2022 08:24 am

Cinque Terre

31.02 K

Cinque Terre

2