ನವದೆಹಲಿ:ಲಖೀಂಪುರ ಘಟನೆಯ ಸಂಬಂಧಿಸಿದಂತೆ ಇಂದು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ , ಉತ್ತರ ಪ್ರದೇಶದ ಸರ್ಕಾರಕ್ಕೆ ಎಲ್ಲ ಸಾಕ್ಷಿಗಳ ಹೇಳಿಕೆಯನ್ನೂ ದಾಖಲಿಸುವಂತೆ ಸೂಚಿಸಿ,ವಿಚಾರಣೆಯನ್ನು ಅಕ್ಟೋಬರ್-26 ಕ್ಕೆ ಮುಂದೂಡಿದೆ.
ಲಖೀಂಪುರ ಘಟನೆಯಲ್ಲಿ ನಾಲ್ವರು ರೈತರು ಸೇರಿದಂತೆ 8 ಜನ ಮೃತಪಟ್ಟಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 44 ಜನ ಸಾಕ್ಷಿಗಳ ಪೈಕಿ, ಕೇವಲ 4 ಜನರ ಹೇಳಿಕೆ ಪಡೆಯಲಾಗಿದೆ. ಅದಕ್ಕೇನೆ ಸುಪ್ರೀಂ ಕೋರ್ಟ್, ರಾಜ್ಯ ಸರ್ಕಾರಕ್ಕೆ ಎಲ್ಲ ಸಾಕ್ಷಿಗಳ ಹೇಳಿಕೆ ದಾಖಲಿಸಿ ಎಂದು ಹೇಳಿದೆ.
ಈ ಸಂಬಂಧ ರಾಜ್ಯ ಸರ್ಕಾರ ಸಲ್ಲಿಸಿದ್ದ ವರದಿಯನ್ನ, ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್,ಹಿಮಾ ಕೋಹ್ಲಿ ಅವರಿರೋ ಪೀಠ ಪರಿಶೀಲಿಸಿ, ಎಲ್ಲ ಸಾಕ್ಷಿಗಳ ಹೇಳಿಕೆ ದಾಖಲಿಸಿ ಅಂತಲೇ ಹೇಳಿ ಪ್ರಕರಣದ ವಿಚಾರಣೆಯನ್ನ ಅಕ್ಟೋಬರ್-26 ಹಾಕಿದೆ.
PublicNext
20/10/2021 03:44 pm