ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : 100 ರೂಪಾಯಿ ದಂಡದ ರಶೀದಿಗೆ 1000 ರೂ.ನ ಸ್ಟಿಕ್ಕರ್!; ವೀಡಿಯೊ ವೈರಲ್

ಬೆಂಗಳೂರು : ಬೆಂಗಳೂರು ನಗರ ಟ್ರಾಫಿಕ್ ಪೊಲೀಸರು ತಮ್ಮ ವಾಹನಕ್ಕೆ ಕಾನೂನು ಬಾಹಿರವಾಗಿ ದಂಡ ಹಾಕಿರುವ ವಿಚಾರ ಮುಂದಿಟ್ಟುಕೊಂಡು ಇಲ್ಲಿ ಇಬ್ಬರು ನಾಗರಿಕರು, ಈ ಟ್ರಾಫಿಕ್ ಪೊಲೀಸರ ಕ್ರಮ ವಿರೋಧಿಸಿ ಸಾಮಾಜಿಕ ಜಾಲ ತಾಣಗಳಲ್ಲಿ ಸಂಬಂಧಿತ ವೀಡಿಯೊ ಹರಿಬಿಟ್ಟಿದ್ದಾರೆ.

ಈ ಇಬ್ಬರು ವಾಹನಿಗರ ಪ್ರಮುಖ ಆಕ್ಷೇಪ ಯಾವುದೆಂದರೆ 100 ರೂಪಾಯಿ ವಿಧಿಸ ಬಹುದಾದ ದಂಡದ ರಶೀದಿಗೆ 1000 ರೂ. ನ ಸ್ಟಿಕ್ಕರ್ ಅಂಟಿಸಿ, ಈ ಟ್ರಾಫಿಕ್ ಪೊಲೀಸರು ಬಡಪಾಯಿ ವಾಹನ ಚಾಲಕ- ಸಂಚಾರಿಗಳಿಂದ ಕಾನೂನು ವಿರುದ್ಧವಾಗಿ ಹಣ ವಸೂಲಿ ಮಾಡುತ್ತಿದ್ದಾರೆ ಎಂಬುದು.

ಕೊರೊನಾ ಕಾಲಘಟ್ಟದ ಈ ಸಂಕಷ್ಟ ಕಾಲ ಹಾಗೂ ಪೆಟ್ರೋಲ್- ಡೀಸೆಲ್ ಬೆಲೆಯೇರಿಕೆಯ ಈ ಕಷ್ಟದ ದಿನಗಳಲ್ಲಿಯೂ ಸಾರ್ವಜನಿಕರ ರಕ್ತವನ್ನು ಪೊಲೀಸರು ಈ ರೀತಿಯಾಗಿ ಹೀರುತ್ತಿದ್ದಾರೆ ಎಂದು ಈ ಇಬ್ಬರು ಮಾರ್ಮಿಕವಾಗಿ ನುಡಿದಿದ್ದಾರೆ.

Edited By : Shivu K
PublicNext

PublicNext

28/09/2021 01:50 pm

Cinque Terre

49.33 K

Cinque Terre

2

ಸಂಬಂಧಿತ ಸುದ್ದಿ