ಬೆಂಗಳೂರು: ಟೋಯಿಂಗ್ ವಿಚಾರದಲ್ಲಿ ಸಾರ್ವಜನಿಕರು ಹಾಗೂ ಪೊಲೀಸರ ಮಧ್ಯೆ ಜಟಾಪಟಿ ನಡೆಯುತ್ತಿರುವ ಪ್ರಸಂಗಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಸಂಚಾರಿ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಅವರು, ಟೋಯಿಂಗ್ ಮಾಡುವಾಗ ಸಂಚಾರ ಪೊಲೀಸರು ಪಾಲಿಸಬೇಕಾದ ನಿಯಮಗಳನ್ನು ಸ್ಪಷ್ಟಪಡಿಸಿದ್ದಾರೆ.
ಟೋಯಿಂಗ್ ಮಾಡುವಾಗ ಟ್ರಾಫಿಕ್ ಸಿಬ್ಬಂದಿ ಹೀಗೆ ಮಾಡಬೇಕು
* ಓರ್ವ ಎಎಸ್ಐ ಸಮವಸ್ತ್ರದಲ್ಲಿ ಟೋಯಿಂಗ್ ವಾಹನದಲ್ಲಿರಬೇಕು.
* ಟೋಯಿಂಗ್ ಆಪರೇಷನ್ಗೂ ಮುನ್ನ ಮೈಕ್ ಮೂಲಕ ಅನೌನ್ಸ್ ಮಾಡಬೇಕು.
* ವಾಹನದ ನಾಲ್ಕೂ ಭಾಗದಿಂದ ಫೋಟೋ ಕ್ಲಿಕ್ಕಿಸಬೇಕು.
* ಬಳಿಕ ವಾಹನವನ್ನ ಟೋಯಿಂಗ್ ಮಾಡಬೇಕು.
* ಟೋಯಿಂಗ್ ಮಾಡುವ ಮುನ್ನವೇ ಮಾಲೀಕ ಬಂದ್ರೆ ನೋ ಪಾರ್ಕಿಂಗಿಗೆ ದಂಡ ವಿಧಿಸಬೇಕು.
* ಟೋಯಿಂಗ್ ವಾಹನಕ್ಕೆ ಹಾಕಿದ ಬಳಿಕ ಬಂದ್ರೆ ಟೋಯಿಂಗ್ ಚಾರ್ಜ್ ಪಾವತಿಸಬೇಕು.
* ಟೋಯಿಂಗ್ ಮಾಡಿದ ವಾಹನಗಳನ್ನ ನಿಲ್ಲಿಸುವ ಜಾಗದಲ್ಲಿ ಸಂಚಾರಿ ಸಿಬ್ಬಂದಿ ಇರಬೇಕು.
* ಈ ನಿಯಮಗಳನ್ನ ಪಾಲಿಸದ ಟೋಯಿಂಗ್ ಸಿಬ್ಬಂದಿಗಳನ್ನ ಕಪ್ಪುಪಟ್ಟಿಗೆ ಸೇರಿಸಲಾಗುತ್ತದೆ.
* ಇದುವರೆಗೂ ನಿಯಮಗಳನ್ನ ಪಾಲಿಸದ ಐವರು ಟೋಯಿಂಗ್ ಸಿಬ್ಬಂದಿಗಳು ಕಪ್ಪು ಪಟ್ಟಿಗೆ ಸೇರಿಸಲಾಗಿದೆ.
PublicNext
25/09/2021 10:30 pm