ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

PM ಕೇರ್ಸ್ ಫಂಡ್ ಸರ್ಕಾರದ ಫಂಡ್ ಅಲ್ವಂತೆ : ಹೈಕೋರ್ಟ್ ಗೆ ಅಫಿಡವಿಟ್

ನವದೆಹಲಿ: ಪ್ರಧಾನಿ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ಸಂಗ್ರಹಿಸಿದ ಪ್ರಧಾನಿ ಮಂತ್ರಿ ಕಚೇರಿ ಸದ್ಯ ಹೊಸ ವರಸೆಯೊಂದನ್ನಾ ತೆಗೆದಿದೆ. ಹೌದು ‘ಪಿಎಂ ಕೇರ್ಸ್ ಫಂಡ್ ಕೇಂದ್ರ ಸರ್ಕಾರದ ನಿಧಿಯಲ್ಲ. ಈ ನಿಧಿಯಡಿ ಸಂಗ್ರಹವಾಗುವ ಮೊತ್ತ ಕನ್ಸಾಲಿಡೆಟೆಡ್ ಫಂಡ್ ಆಫ್ ಇಂಡಿಯಾಕ್ಕೆ ಸಂದಾಯವಾಗುವುದಿಲ್ಲ’ ಎಂದು ಪ್ರಧಾನಿ ಮಂತ್ರಿ ಕಚೇರಿ (ಪಿಎಂಒ) ದೆಹಲಿ ಹೈಕೋರ್ಟ್ ಗೆ ತಿಳಿಸಿದೆ.

ಪಿಎಂಒದ ಅಧೀನ ಕಾರ್ಯದರ್ಶಿ, ಹೈಕೋರ್ಟ್ ಗೆ ಸಲ್ಲಿಸಿರುವ ಅಫಿಡವಿಟ್ ನಲ್ಲಿ ಈ ಮಾಹಿತಿ ನೀಡಿದ್ದಾರೆ. ಅವರು ಪಿಎಂ ಕೇರ್ಸ್ ಟ್ರಸ್ಟ್ನ ಗೌರವ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪಿಎಂ ಕೇರ್ಸ್ ಫಂಡ್ ಗೆ ಸಂಬಂಧಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಡಿ.ಎನ್.ಪಟೇಲ್ ಹಾಗೂ ನ್ಯಾಯಮೂರ್ತಿ ಅಮಿತ್ ಬನ್ಸಲ್ ಅವರಿರುವ ನ್ಯಾಯಪೀಠ, ವಿಚಾರಣೆಯನ್ನು ಸೆ. 27ಕ್ಕೆ ಮುಂದೂಡಿದ್ದಾರೆ.

Edited By : Nirmala Aralikatti
PublicNext

PublicNext

23/09/2021 06:16 pm

Cinque Terre

62.21 K

Cinque Terre

17