ಬೆಂಗಳೂರು: ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಹಿರಿಯ ರಾಜಕಾರಣಿಗಳ ಹಾಗೂ ಪೊಲೀಸ್ ಅಧಿಕಾರಿಗಳ ಪೋನ್ ಕದ್ದಾಲಿಕೆ (Phone Tapping) ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಟೆಲಿನೋನ್ ಕದ್ದಾಲಿಕೆ ಪ್ರಕರಣದಲ್ಲಿ ಸಿಬಿಐ ಬಿ ವರದಿ ಸಲ್ಲಿಸಿದ್ದು, ಇದಕ್ಕೆ ಅಕ್ಷೇಪಣೆ ವ್ಯಕ್ತಪಡಿಸಿ ರೈಲ್ವೇ ಎಡಿಜಿಪಿ ಭಾಸ್ಕರರಾವ್ ಅವರು ಸಿಬಿಐ ವಿಶೇಷ ನ್ಯಾಯಲಯಕ್ಕೆ ಆಕ್ಷೇಪಣಾ ಅರ್ಜಿ ಸಲ್ಲಿಸಿದ್ದಾರೆ. ಇಬ್ಬರು ಹಿರಿಯ ಐಪಿಎಸ್ ಅಧಿಕಾರಿಗಳ ನಡುವಿನ "ಟೆಲಿಪೋನ್ ಕದ್ದಾಲಿಕೆ ಪ್ರಕರಣ" ಗುದ್ದಾಟ ಮತ್ತೆ ಬೀದಿಗೆ ಬಂದಿದೆ.
ರಾಜಕಾರಣಿಗಳು, ಅಧಿಕಾರಿಗಳ ಫೋನ್ ಕದ್ದಾಲಿಕೆ (Phone Tapping) ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಅಧಿಕಾರಿಗಳು ಇಂದು ಬಿ ರಿಪೋರ್ಟ್ ಸಲ್ಲಿಕೆಗೆ ಮುಂದಾಗಿದ್ದರು. ಸಿಟಿ ಸಿವಿಲ್ ಕೋರ್ಟ್ನಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಕೆ ಮಾಡಲು ಸಿಬಿಐ ಅಧಿಕಾರಿಗಳು ಮುಂದಾಗಿದ್ದರು. ಆದರೆ ಈ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ ಹಿರಿಯ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ (Bhaskar Rao), ಕೋರ್ಟ್ಗೆ ಪ್ರೊಟೆಸ್ಟ್ ಪಿಟಿಷನ್ ಸಲ್ಲಿಸಿದ್ದಾರೆ. ಹೀಗಾಗಿ ಬಿ ರಿಪೋರ್ಟ್ ಸಲ್ಲಿಸದೆ ಸಿಬಿಐ ಅಧಿಕಾರಿಗಳು ವಾಪಸ್ ಆಗಿದ್ದಾರೆ.
ಫೋನ್ ಕದ್ದಾಲಿಕೆ ಸಂಬಂಧ ಮತ್ತೊಮ್ಮೆ ತನಿಖೆ ಮಾಡಬೇಕು. ಇಬ್ಬರ ವಿರುದ್ಧ ಸಾಕ್ಷ್ಯವಿದ್ದರೂ ಮುಚ್ಚಿಹಾಕಲು ಯತ್ನಿಸಲಾಗುತ್ತಿದೆ ಅಂತ ಎಡಿಜಿಪಿ ಅಲೋಕ್ ಕುಮಾರ್ ವಿರುದ್ಧ ಹಾಗೂ ಪತ್ರಕರ್ತೆ ಕುಶಾಲ ವಿರುದ್ಧ ಭಾಸ್ಕರ್ ರಾವ್ ನೇರ ಆರೋಪ ಮಾಡಿದ್ದಾರೆ.
ಸಿಬಿಐ ತನಿಖೆ ಸರಿಯಾಗಿಲ್ಲ ಎಂದು ಪ್ರೊಟೆಸ್ಟ್ ಅಪ್ಲಿಕೇಶನ್ ಹಾಕಿದ್ದೇವೆ. ಅಲೋಕ್ ಕುಮಾರ್ ಹಾಗು ಕುಶಾಲ ವಿರುದ್ಧ ಸಾಕ್ಷಿ ಇದೆ. ಅದರೂ ಕೇಸ್ಗೆ ಬಿ ರಿಪೋರ್ಟ್ ಸಲ್ಲಿಕೆ ಮುಂದಾಗಿದ್ದು ಸರಿಯಲ್ಲ. ಲಾಭಿ ಮಾಡಿದ್ದೀನಿ ಎಂದು ಅರೋಪಿಸಲಾದ ಆಡಿಯೋ ಹೊರಗೆ ಬಂದಿತ್ತು. ಸರ್ಕಾರ ಕೇಸ್ನ ಸಿಬಿಐಗೆ ವರ್ಗಾವಣೆ ಮಾಡಿತ್ತು. ಕುಲ್ದೀಪ್ ಕುಮಾರ್ ಜೈನ್ ದೂರುದಾರಾಗಿದ್ರು. ಈಗ ಕುಲ್ದೀಪ್ ಜೈನ್ ಕೇಸ್ ಬಿ ರಿಪೋರ್ಟ್ ಸಲ್ಲಿಕೆಗೆ ಯಾವುದೇ ಅಭ್ಯಂತರ ಇಲ್ಲಾ ಎಂದು ಹೇಳಿಕೆ ನೀಡಿದ್ದಾರೆ. ಅದ್ರೆ ಇದು ಕಲ್ದೀಪ್ ಕುಮಾರ್ ಜೈನ್ ಕೇಸ್ ಅಲ್ಲ. ಸರ್ಕಾರದ ಕೇಸ್. ನ್ಯಾಯ ಸಿಗಬೇಕು. ಸಿಬಿಐ ಹಾಗು ಕಾನೂನು ನ್ಯಾಯಾಲಯದ ಮೇಲೆ ನಂಬಿಕೆ ಇದೆ ಅಂತ ಕುಲ್ದೀಪ್ ಕುಮಾರ್ ಜೈನ್ ಅಭಿಪ್ರಾಯಟಪಟ್ಟರು.
ಪ್ರಕರಣವೇನು?
2019ರ ಹೊತ್ತಿಗೆ ರಾಜಕೀಯ ವಲಯದಲ್ಲಿ ಫೋನ್ ಕದ್ದಾಲಿಕೆ ಪ್ರಕರಣ ತೀವ್ರ ಸಂಚಲಕ್ಕೆ ಕಾರಣವಾಗಿತ್ತು. ಈ ಪ್ರಕರಣವನ್ನು ಬಿಜೆಪಿ ಸರ್ಕಾರ ಸಿಬಿಐ ತನಿಖೆಗೆ ವಹಿಸಿತ್ತು. ಹೆಚ್.ಡಿ.ಕುಮಾರಸ್ವಾಮಿ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಫೋನ್ ಕದ್ದಾಲಿಕೆ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಮೈತ್ರಿ ಸರ್ಕಾರದ ವೇಳೆ ಪಕ್ಷಗಳ ಮುಖಂಡರು, ಮಾಧ್ಯಮ ಪ್ರತಿನಿಧಿಗಳು, ಐಪಿಎಸ್ ಅಧಿಕಾರಿಗಳು ಸೇರಿದಂತೆ 300ಕ್ಕೂ ಹೆಚ್ಚು ಜನರ ಫೋನ್ಗಳನ್ನ ಟ್ಯಾಪ್ ಮಾಡಲಾಗಿದೆ. ಎಲ್ಲರ ಮಾತುಗಳನ್ನು ಕದ್ದಾಲಿಕೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.
ಕಾಂಗ್ರೆಸ್ ನಾಯಕರ ದೂರವಾಣಿ ಕದ್ದಾಲಿಕೆ ಆರೋಪ
2018ರ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದಿತ್ತು. ಬಿಜೆಪಿ 104, ಕಾಂಗ್ರೆಸ್ 86, ಜೆಡಿಎಸ್ಗೆ 36 ಸ್ಥಾನ ಬಂದಿತ್ತು. ರಾಜ್ಯಪಾಲರು ಸರ್ಕಾರ ರಚಿಸಲು ಯಡಿಯೂರಪ್ಪಗೆ ಆಹ್ವಾನ ನೀಡಲಾಗಿತ್ತು. ಆದರೆ ಯಡಿಯೂರಪ್ಪ ಬಹುಮತ ಸಾಬೀತುಪಡಿಸಲಾಗಲಿಲ್ಲ. ಬಳಿಕ ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಯಾಯಿತು. ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿ ಸಿಎಂ ಆಗಿದ್ದರು. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಜೆಡಿಎಸ್ಗೆ ಬೆಂಬಲ ನೀಡಿದ್ದೆವು. ಇದಕ್ಕೆ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಕೈಜೋಡಿಸಿತು. 2019ರ ಜುಲೈನಲ್ಲಿ 17 ಶಾಸಕರು ರಾಜೀನಾಮೆ ನೀಡಿದರು. ಯಾರೂ ಸ್ವಯಂಪ್ರೇರಿತರಾಗಿ ರಾಜೀನಾಮೆ ನೀಡಿರಲಿಲ್ಲ. ಆ ಶಾಸಕರು ಕುಮಾರಸ್ವಾಮಿ ಸರ್ಕಾರ ಪತನಗೊಳಿಸಿ ಬಿಜೆಪಿ ಸೇರಿದರು. ಇದಕ್ಕೆ ಬಿಜೆಪಿಯೇ ಕಾರಣ ಎಂಬ ಆರೋಪಗಳು ಕೇಳಿಬಂದಿತ್ತು.
PublicNext
31/08/2021 09:07 pm