ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ: ಶ್ರೀರಾಮ ಶೋಭಾಯಾತ್ರೆ ರದ್ದುಗೊಳಿಸಿದ ಪೊಲೀಸರು: ಮುತಾಲಿಕ್ ಗರಂ

ಕೋಲಾರ: ಕೋಲಾರದಲ್ಲಿ ಇಂದು ಸಂಜೆ ಶ್ರೀರಾಮಸೇನೆಯಿಂದ ರಾಮನವಮಿ ಅಂಗವಾಗಿ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಆದರೆ ನಿಗದಿತ ಮಾರ್ಗದ ಹೊರತಾಗಿ ಬೇರೆ ಮಾರ್ಗದಲ್ಲಿ ಹೊರಟಿದ್ದರಿಂದ ಪೊಲೀಸರು ಶೋಭಾಯಾತ್ರೆಯನ್ನು ತಡೆದಿದ್ದಾರೆ. ಹಾಗೂ ಮೆರವಣಿಗೆಯಲ್ಲಿದ್ದ ಓಪನ್ ಜೀಪ್ ಮತ್ತು ಡಿಜೆ ವಾಹನವನ್ನು ವಶಕ್ಕೆ ಪಡೆದು ಶೋಭಾಯಾತ್ರೆಯನ್ನೇ ರದ್ದುಗೊಳಿಸಿದ್ದಾರೆ. ಇದರಿ‌ಂದ ಆಕ್ರೋಶಗೊಂಡ ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಪೊಲೀಸರ ಮೇಲೆ ಗರಂ ಆಗಿದ್ದಾರೆ‌.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೋಲಾರ ಏನು ಪಾಕಿಸ್ತಾನದಲ್ಲಿ ಇಲ್ಲ. ಬಹುದೊಡ್ಡ ಸೂಕ್ಷ್ಮ ಪ್ರದೇಶವೂ ಅಲ್ಲ. ಭಟ್ಕಳದಂತಹ ಪ್ರದೇಶದಲ್ಲೇ ಸಭೆ ಮಾಡಿದ್ದೇನೆ. ಕೋಲಾರದಲ್ಲಿ‌ ನನ್ನನ್ನು ತಡೆಯುವುದರ ಹಿಂದೆ ಯಾವುದೋ ಶಕ್ತಿ ಕೆಲಸ ಮಾಡುತ್ತಿದೆ. ಪೊಲೀಸ್ ಇಲಾಖೆ ಏಕಪಕ್ಷೀಯವಾಗಿ ನಡೆದುಕೊಂಡಿದೆ. ಪೊಲೀಸರ ವರ್ತನೆ ಸರಿಯಲ್ಲ. ಮುಂದಿನ ದಿನಗಳಲ್ಲಿ ಇದು ನಿಮ್ಮನ್ನ ನುಂಗಿ ಹಾಕುತ್ತದೆ. ನೀವು ದೇಶ ಭಕ್ತಿಯನ್ನು ತಡೆಯುತ್ತಿದ್ದೀರಿ. ನಮ್ಮ ಸ್ವಾತಂತ್ರ್ಯವನ್ನ ತಡೆಯುತ್ತಾ ಇದ್ದೀರಾ? ಸಂವಿಧಾನವನ್ನ ಸಹ ತಡೆಯುತ್ತಿದ್ದೀರಿ. ಈ ರೀತಿಯ ದಾದಾಗಿರಿಯ ಮನಸ್ಥಿತಿ ಸರಿಯಲ್ಲ. ಮುಂದಿನ ದಿನಗಳಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದ್ದಾರೆ.

Edited By : Manjunath H D
PublicNext

PublicNext

10/04/2022 10:05 pm

Cinque Terre

159.91 K

Cinque Terre

36