ತುಮಕೂರು: ಇತ್ತೀಚಿನ ದಿನಗಳಲ್ಲಿ ಅನೇಕರ ಬದುಕಿನಲ್ಲಿ ದಾಂಪತ್ಯ ಜೀವನ ಬಹುಬೇಗ ಹಾಳಾಗುತ್ತದೆ. ಹೀಗೆ ಐದು ಜೋಡಿಗಳು, ಸಂಗಾತಿಯ ಸಹವಾಸವೇ ಬೇಡ ಎಂದು ಪ್ರತ್ಯೇಕವಾಗಿ ಬದುಕುತ್ತಿದ್ದರು. ವಿಚ್ಛೇದನಕ್ಕಾಗಿ ಕೋರ್ಟ್ ಮೊರೆ ಹೋಗಿದ್ದರು. ಆದರೆ ಈಗ ವಕೀಲರು, ನ್ಯಾಯಾಧೀಶರು ದೊಡ್ಡ ಮನಸ್ಸು ಮಾಡಿ ವಿಚ್ಛೇದನಕ್ಕೆ ಮುಂದಾಗಿದ್ದ ಐದು ಜೋಡಿಗಳನ್ನ ಮತ್ತೆ ಒಂದು ಮಾಡಿ ಕಳುಹಿಸಿದ್ದಾರೆ.
ತುಮಕೂರು ಡಿಸ್ಟ್ರಿಕ್ಟ್ ಕೋರ್ಟ್ನಲ್ಲಿ ನಡೆದ ಲೋಕ್ ಅದಾಲತ್ನಲ್ಲಿ ಐದು ಜೋಡಿಗಳು ಡಿವೋರ್ಸ್ ಬೇಡ ಎಂದು ಮತ್ತೆ ಒಂದಾಗಿದ್ದಾರೆ. ಪರಸ್ಪರ ಹಾರ ಬದಲಿಸಿಕೊಂಡು ಐದು ಜೋಡಿಗಳು ಒಂದಾದ ಕಾರಣ ಕುಟುಂಬಸ್ಥರು ನೆಮ್ಮದಿಯಿಂದ ನಿಟ್ಟುಸಿರು ಬಿಟ್ಟಿದ್ದಾರೆ.
ನ್ಯಾಯಾಧೀಶರಾದ ಮುನಿರಾಜು, ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ನೂರುನ್ನೀಸಾ ನೇತೃತ್ವದಲ್ಲಿ ಜೋಡಿಗಳು ಒಂದಾಗಿವೆ. ವಿಚ್ಛೇದನ ಬೇಡ ಎಂದು ಮತ್ತೆ ಒಂದಾಗಿದ್ದಕ್ಕೆ ಕೋರ್ಟ್ ಆವರಣದಲ್ಲಿ ಸಂಭ್ರಮ ಮನೆ ಮಾಡಿದೆ.
PublicNext
14/08/2022 06:35 pm