ಉತ್ತರಾಖಂಡ: ನಮ್ಮೂರಲ್ಲಿ ಸ್ವಲ್ಪ ಚಳಿ ಮೈಗೆ ತಾಕಿದ್ರೆ ಸಾಕು ನಾವು ಮನೆ ಬಾಗಿಲು ಹಾಕಿ ಚಾದರ ಹೊದ್ದುಕೊಳ್ಳುತ್ತೇವೆ. ಆದ್ರೆ ನಮ್ಮ ಯೋಧರು ಹಾಗಲ್ಲ. ಮಳೆ, ಗಾಳಿ, ಚಳಿ, ಬಿಸಿಲು, ಚಂಡಮಾರುತ ಇದ್ಯಾವುದನ್ನೂ ಲೆಕ್ಕಿಸದೇ ಅವರು ಡ್ಯೂಟಿ ಮಾಡ್ತಾರೆ.
ಇದೆಲ್ಲದಕ್ಕೆ ಉದಾಹರಣೆ ಎಂಬಂತೆ ಒಂದು ವಿಡಿಯೋ ಇಲ್ಲಿದೆ. ಉತ್ತರಾಖಂಡ್ ಗಡಿ ಭಾಗದಲ್ಲಿ ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ಸಿಬ್ಬಂದಿ -25°ಸೆಲ್ಸಿಯಸ್ ಉಷ್ಣತೆ ಇರುವ ಭೀಕರ ಚಳಿಯಲ್ಲೂ ತಾಲೀಮು ನಡೆಸುತ್ತಿದ್ದಾರೆ. ದೇಶಕ್ಕಾಗಿ ತಮ್ಮನ್ನು ತಾವು ಮುಡಿಪಾಗಿಡೋದು ಅಂದ್ರೆ ಇದೇ ಅಲ್ವೇ?
PublicNext
13/02/2022 05:44 pm