ಲಕ್ನೋ: ಉತ್ತರ ಪ್ರದೇಶದ ಅಲಾಹಾಬಾದ್ ಹೈಕೋರ್ಟ್ ನ್ಯಾಯಾಧೀಶರೊಬ್ಬರು ವಿದ್ಯಾರ್ಥಿಯ ಐಐಟಿ ಶಿಕ್ಷಣ ಕನಸಿಗೆ ರೆಕ್ಕೆ ಮೂಡಿಸಿ ಅನೇಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಹೌದು. ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯನ್ನು ಕ್ಲಿಯರ್ ಮಾಡಿದ್ದ ಸಂಸ್ಕೃತಿ ಎಂಬ ವಿದ್ಯಾರ್ಥಿನಿಗೆ ಐಐಟಿಯಲ್ಲಿ ಸೀಟು ಸಿಕ್ಕಿತ್ತು. ಅಕ್ಟೋಬರ್ 15ರ ಒಳಗೆ ಪ್ರವೇಶ ಶುಲ್ಕ 15,000 ರೂ.ಗಳನ್ನು ಪಾವತಿಸುವಂತೆ ಆಕೆಗೆ ತಿಳಿಸಲಾಗಿತ್ತು. ಆದರೆ ಆ ಗಡುವಿನಲ್ಲಿ ಹಣ ಹೊಂದಿಸಲು ವಿದ್ಯಾರ್ಥಿನಿಗೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಆಕೆ ಕಾಲಾವಕಾಶ ಕೋರಿ ಹೈಕೋರ್ಟ್ ಮೊರೆ ಹೋಗಿದ್ದಳು. ವಿಚಾರಣೆ ಬಳಿಕ ಆಕೆಯ ಶುಲ್ಕವನ್ನು ನ್ಯಾಯಾಧೀಶ ಡಿ.ಕೆ ಸಿಂಗ್ ಅವರೇ ಶುಲ್ಕವನ್ನು ತಾವೇ ಪಾವತಿಸಿದ್ದಾರೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆಕೆಯ ಪರಿಸ್ಥಿತಿಯನ್ನು ವಿಶೇಷ ಎಂದು ಪರಿಗಣಿಸಿ ವಿನಾಯಿತಿ ನೀಡುವಂತೆ ವಾರಾಣಸಿ ಕಾಲೇಜಿಗೆ ನಿರ್ದೇಶನ ನೀಡಿದೆ. ಒಂದು ವೇಳೆ ಆಕೆಯ ಸೀಟು ಈಗಾಗಲೇ ಭರ್ತಿಯಾಗಿದ್ದರೆ ಹೆಚ್ಚುವರಿ ಸೀಟನ್ನು ಸೃಷ್ಟಿಸಿ ಆಕೆಗೆ ಅಲಾಟ್ ಮಾಡುವಂತೆ ಸೂಚನೆ ನೀಡಿದೆ.
PublicNext
01/12/2021 05:36 pm