ಬೆಳಗಾವಿ: ಈ ದೃಶ್ಯ ನೋಡಿದ್ರೆ ನೀವು ರೊಚ್ಚಿಗೆಳೋದು ಗ್ಯಾರಂಟಿ. ಸಮಾಜಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಸತಿ ನಿಲಯದ ವಿದ್ಯಾರ್ಥಿಗಳ ಕಷ್ಟ ಅಷ್ಟಿಷ್ಟಲ್ಲ. ನಿತ್ಯ ನುಶಿ ಮಿಶ್ರಿತ ಆಹಾರ ದಾಸ್ತಾನು ಕಂಡು ರೊಚ್ಚಿಗೆದ್ದ ವಿದ್ಯಾರ್ಥಿಗಳು ಮಾಡಿದ್ದೇನು? ವಸತಿ ನಿಲಯಕ್ಕೆ ಭೇಟಿ ನೀಡಿದ ಶಾಸಕ, ಡಿಸಿ ಮಾಡಿದ್ದೇನು? ಅಷ್ಟಕ್ಕೂ ಆ ವಸತಿ ನಿಲಯದಲ್ಲಿ ಅಂತಾ ಯಾವ ದೃಶ್ಯ ನಿಮ್ಮನ್ನು ರೊಚ್ಚಿಗೆಬ್ಬಿಸುತ್ತೆ? ಈ ಸ್ಟೋರಿ ನೋಡಿ..
ಹೀಗೆ, ಇಡ್ಲಿ-ಸಾಂಬಾರಿನಲ್ಲಿ ನುಶಿ-ಜಿರಳೆ ಮಿಶ್ರಣ. ಆಹಾರಕ್ಕಿಟ್ಟಿದ್ದ ಪಾತ್ರೆಗಳ ಸಮೇತ ಪ್ರತಿಭಟನೆ. ಆಹಾರ ಬೇಡ, ವಿಷ ನೀಡಿ ಎಂದು ಗೋಗರೆಯುತ್ತಿರುವ ವಸತಿ ನಿಲಯದ ವಿದ್ಯಾರ್ಥಿಗಳು. ಸ್ಥಳಕ್ಕೆ ದೌಡಾಯಿಸಿ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಳ್ಳುತ್ತಿರುವ ಶಾಸಕ, ಡಿಸಿ. ಹೌದು ಈ ದೃಶ್ಯ ಕಂಡು ಬಂದಿದ್ದು ಬೆಳಗಾವಿಯ ಸಂಗಮೇಶ್ವರ ನಗರದ ಡಾ.ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿ.
ನಾಡಿನಾದ್ಯಂತ ಇಂದು ಗಣೇಶ ಚತುರ್ಥಿ ಹಬ್ಬ. ಪ್ರತಿಯೊಬ್ಬರು ಮನೆಯಲ್ಲಿ ರುಚಿಕರ ಆಹಾರ ಸವಿದು ಹಬ್ಬ ಆಚರಣೆ ಮಾಡ್ತಿದ್ದಾರೆ. ಆದರೆ ಇಲ್ಲಿನ ಮಕ್ಕಳಿಗೆ ಮಾತ್ರ ಕಳಪೆ ಆಹಾರ ನೀಡಲಾಗಿತ್ತು. ಇದರಿಂದ ರೊಚ್ಚಿಗೆದ್ದ ಮಕ್ಕಳಿಂದು ಪ್ರತಿಭಟನೆ ನಡೆಸಿದ್ರು. ವಸತಿ ನಿಲಯದ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಒಳ್ಳೆಯ ಆಹಾರ ನೀಡಲಾಗದಿದ್ರೆ ವಿಷ ನೀಡಿ ಎಂದು ಆಕ್ರೋಶ ಹೊರಹಾಕಿದ್ರು.
ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಶಾಸಕ ಅನಿಲ್ ಬೆನಕೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು. ಬಳಿಕ ಜಿಲ್ಲಾಧಿಕಾರಿ ನಿತೇಶ ಪಾಟೀಲ ಕೂಡ ಸ್ಥಳಕ್ಕೆ ದೌಡಾಯಿಸಿದರು. ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಶಾಸಕ ಅನಿಲ್ ಬೆನಕೆ ವಸತಿ ನಿಲಯದ ಅಡುಗೆ ಕೋಣೆಗೆ ಭೇಟಿ ನೀಡಿ, ನುಶಿ-ಜಿರಳೆ ಇರುವುದನ್ನು ಕಂಡು ಆಕ್ರೋಶ ಹೊರಹಾಕಿದರು. ವಸತಿ ಸಿಬ್ಬಂದಿಗಳಿಗೆ ಕ್ಲಾಸ್ ತೆಗೆದುಕೊಂಡರು.
PublicNext
02/09/2022 01:15 pm