ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೂತನ ಅಟಾರ್ನಿ ಜನರಲ್ ಆಗಿ ಹಿರಿಯ ವಕೀಲ ವೆಂಕಟರಮಣಿ ನೇಮಕ

ನವದೆಹಲಿ: ಪ್ರಸ್ತುತ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಅವರ ಸೇವೆ ಜೂನ್ 30 ರಂದು ಕೊನೆಗೊಂಡಿದೆ. ಆದರೆ ಅವರ ಸೆ.30ರ ವರೆಗೆ ಸೇವೆಯನ್ನು ವಿಸ್ತರಿಸಲಾಗಿತ್ತು. ಸದ್ಯ ಅವಧಿ ಮುಗಿತ್ತಾ ಬಂದಿರುವ ಹಿನ್ನೆಲೆಯಲ್ಲಿ ಹಿರಿಯ ವಕೀಲ ವೆಂಕಟರಮಣಿ ಅವರನ್ನು ನೂತನ ಅಟಾರ್ನಿ ಜನರಲ್ (ಎ.ಜಿ) ಯಾಗಿ ಕೇಂದ್ರ ಸರ್ಕಾರ ನೇಮಿಸಿದೆ.

ಸುಪ್ರೀಂ ಕೋರ್ಟ್ನ ಹಿರಿಯ ವಕೀಲ ಆರ್. ವೆಂಕಟರಮಣಿ ಅವರ ಅಧಿಕಾರ ಅವಧಿ ಮೂರು ವರ್ಷ ಇರಲಿದೆ. ವೆಂಕಟರಮಣಿಯವರು 1950ರ ಏಪ್ರಿಲ್ 13ರಂದು ಪುದುಚೇರಿಯಲ್ಲಿ ಜನಿಸಿದ ಇವರು, 1977ರಲ್ಲಿ ತಮಿಳುನಾಡಿನಿಂದ ವಕೀಲ ವೃತ್ತಿ ಆರಂಭಿಸಿದರು. 2014ರಿಂದ 2017ರವರೆಗೆ ಎ.ಜಿ ಆಗಿದ್ದ ಮುಕುಲ್ ರೋಹಟಗಿ ಅವರನ್ನು ಮತ್ತೊಂದು ಅವಧಿಗೆ ನೇಮಿಸಲಾಗುತ್ತದೆ ಎನ್ನಲಾಗಿತ್ತು. ಆದರೆ, ಕೇಂದ್ರದ ಈ ಪ್ರಸ್ತಾವವನ್ನು ರೋಹಟಗಿ ತಿರಸ್ಕರಿಸಿದ್ದರು.

Edited By : Nirmala Aralikatti
PublicNext

PublicNext

29/09/2022 09:25 am

Cinque Terre

58.99 K

Cinque Terre

0

ಸಂಬಂಧಿತ ಸುದ್ದಿ