ತುಮಕೂರು: ಸರಳವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ ಅವರನ್ನು ಹತ್ಯೆಗೈದು ಪರಾರಿಯಾಗಿದ್ದ ಮಹಾಂತೇಶ್ ಶಿರೂರು ಹಾಗೂ ಮಂಜುನಾಥ್ನನ್ನು ಪೊಲೀಸರು ಕೆಲವೇ ಗಂಟೆಗಳಲ್ಲಿ ಅರೆಸ್ಟ್ ಮಾಡಿದ್ದರು. ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಪೊಲೀಸರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅವಾರ್ಡ್ ಸಹ ಘೋಷಣೆ ಮಾಡಿದ್ದಾರೆ.
ಗುರೂಜಿ ಹತ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ತುಮಕೂರಿನಲ್ಲಿ ಮಾತನಾಡಿದ ಗೃಹ ಸಚಿವರು, 'ಹುಬ್ಬಳ್ಳಿ, ರಾಮದುರ್ಗ ಪೊಲೀಸರು ಒಳ್ಳೆ ಕೆಲಸ ಮಾಡಿದ್ದಾರೆ. ಜೆಸಿಬಿ ಅಡ್ಡ ಇಟ್ಟು ಹತ್ಯೆ ಮಾಡಿದ ಆರೋಪಿಗಳನ್ನ ತಡೆದಿದ್ದಾರೆ. ಸ್ವಲ್ಪ ಹೆಚ್ಚು ಕಡಿಮೆಯಾಗಿದರೂ ಆರೋಪಿಗಳು ಗಡಿದಾಟಿ ಮಹಾರಾಷ್ಟ್ರಕ್ಕೆ ಎಸ್ಕೇಪ್ ಆಗುತ್ತಿದ್ದರು. ಪೊಲೀಸರ ಕಾರ್ಯವೈಖರಿಗೆ ಹೃದಯ ತುಂಬಿ ಬಂದಿದೆ. ನಾಳೆ ಪೊಲೀಸರನ್ನ ಭೇಟಿ ಮಾಡಿ ಅವಾರ್ಡ್ ಘೋಷಣೆ ಮಾಡುತ್ತೇನೆ ಹಾಗೂ ಸರ್ಟಿಫೀಕೇಟ್ ಕೊಡುತ್ತೇವೆ ಎಂದು ಹೇಳಿದ್ದಾರೆ.
PublicNext
06/07/2022 04:01 pm